ಭಾನುವಾರ, ಸೆಪ್ಟೆಂಬರ್ 15, 2019
23 °C

ಯುವಕರ ಕಾರ್ಯ ಅನುಕರಣೀಯ

Published:
Updated:

‘ಗ್ರಾಮಸ್ಥರಿಂದ ಕೆರೆಗೆ ಮರುಜೀವ’ ವರದಿ ಓದಿ (ಪ್ರ.ವಾ., ಮೇ 10) ಸಂತೋಷವಾಯಿತು. ಬೆಂಗಳೂರು ಹೊರವಲಯದ ಹೆಸರಘಟ್ಟ ವ್ಯಾಪ್ತಿಯಲ್ಲಿ 30 ವರ್ಷಗಳಿಂದ ಪಾಳುಬಿದ್ದಿದ್ದ ಚೆಲ್ಲಹಳ್ಳಿ ಕೆರೆಗೆ ಗ್ರಾಮದ ಯುವಕರು ಮರುಜೀವ ನೀಡಿದ್ದಾರೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಪರದಾಡುತ್ತಿರುವ ರಾಜಕಾರಣಿಗಳನ್ನು ನೆಚ್ಚಿ ಕೂರದೆ, ಯುವಕರೇ ಶ್ರಮದಾನದ ಮೂಲಕ ಹೂಳೆತ್ತಿ ಕೆರೆ ಕಂಗೊಳಿಸುವಂತೆ ಮಾಡಿರುವುದು ಅನುಕರಣೀಯ. ಈ ಕಾರ್ಯ ಗ್ರಾಮದ ಸುತ್ತಮುತ್ತ ಒತ್ತುವರಿಯಾಗಿ ಅಳಿವಿನಂಚಿನಲ್ಲಿರುವ ಇತರ ಕೆರೆಗಳ ಅಭಿವೃದ್ಧಿಗೂ ಸ್ಫೂರ್ತಿದಾಯಕ.

–ಎಂ.ಗುರುಮೂರ್ತಿ, ಹಳೇಬೀಡು

Post Comments (+)