ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಅಭಿವೃದ್ಧಿಯೆಂಬ ಮರೀಚಿಕೆಯ ಹಿಂದೆ

ಅಕ್ಷರ ಗಾತ್ರ

ಸುಸ್ತಾದ ಸಹ್ಯಾದ್ರಿ ಕಣಿವೆಯ ಬಗ್ಗೆ ಅಖಿಲೇಶ್ ಚಿಪ್ಪಳಿ ಅವರು ಸೊಗಸಾಗಿ ವಿಶ್ಲೇಷಣೆ ಮಾಡಿದ್ದಾರೆ (ಪ್ರ.ವಾ., ಆ. 19). ಪರಿಸರದ ಸೂಕ್ಷ್ಮಗಳನ್ನು ಅರಿಯದೇ ಬಹುಮಹಡಿ ಕಟ್ಟಡದಲ್ಲಿ ಕುಳಿತು ವ್ಯಾವಹಾರಿಕ ಲೆಕ್ಕಚಾರಗಳಲ್ಲಿ ಮುಳುಗಿರುವ ಮಂದಿ ಮಾಡುವ ಬೃಹತ್ ಯೋಜನೆಗಳಿಗೆ ಬಲಿಯಾಗುವುದು ಜೀವವೈವಿಧ್ಯ. ಮನುಷ್ಯಕೇಂದ್ರಿತ ಈ ಬಗೆಯ ಅಭಿವೃದ್ಧಿ ನಿಜಕ್ಕೂ ಅವಶ್ಯವೇ? ಅಭಿವೃದ್ಧಿ ಎಂದರೇನು? ಮೋಜಿನ ತಾಣಗಳನ್ನು ಸೃಷ್ಟಿಸುವುದೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಯೋಚಿಸಬೇಕಾಗಿದೆ.

ಚತುಷ್ಪಥ, ದಶಪಥಗಳ ಧಾವಂತದ ಜೀವನ ಬೇಕೆ? ಇದಕ್ಕಾಗಿ ಖರ್ಚು ಮಾಡುತ್ತಿರುವ ಕೋಟಿಗಟ್ಟಲೆ ಹಣದಿಂದ ನಿರೀಕ್ಷಿತ ಅಭಿವೃದ್ಧಿ ಸಾಧ್ಯವೇ? ಪರಿಸರ ವಿರೋಧಿ ಯೋಜನೆಗಳನ್ನು ಹಮ್ಮಿಕೊಂಡು ಜೀವಿಗಳು, ಪರಿಸರವನ್ನು ಹಾಳುಗೆಡಹುವುದೇಕೆ? ಅದೇ ಹಣದಿಂದ ಜನರಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಬಹುದಲ್ಲವೇ? ಸರ್ಕಾರಿ ಶಾಲೆಗಳ ಉನ್ನತೀಕರಣ, ಆರೋಗ್ಯ ಸವಲತ್ತುಗಳ ಅಭಿವೃದ್ಧಿ ಮುಖ್ಯವೇ ಅಥವಾ ಜೋಗದಲ್ಲಿ ಕೇಬಲ್ ಕಾರ್ ಮುಖ್ಯವೇ? ಪ್ರಕೃತಿಯನ್ನು ನಿಕೃಷ್ಟವಾಗಿ ಕಾಣುತ್ತಿರುವುದರ ಪರಿಣಾಮವಾಗಿ ಕೊರೊನಾ ತಂದ ತಲ್ಲಣ ಗಮನಕ್ಕೆ ಬಾರದೇ ಹೋಗುತ್ತಿದೆಯಲ್ಲಾ. ಪ್ರತಿಸಲವೂ ಪರಿಸರಾಸಕ್ತರ ಮನವಿಯನ್ನು ಕಡೆಗಣಿಸಿ, ಅವರನ್ನು ವ್ಯಾಧಿಯೆಂದು ಪರಿಗಣಿಸಿರುವ ಜನರಿಗೆ ಬೆಳಕು ತೋರಿಸುವವರಾರು?

- ಡಾ. ಎಸ್.ಶಿಶುಪಾಲ,ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT