ದಿನ ಭವಿಷ್ಯ: 24 ಆಗಸ್ಟ್ 2025 ಭಾನುವಾರ- ನಿಮ್ಮ ಪ್ರತಿಭೆ ಗುರುತಿಸುವ ಕಾಲ ಇದು
Published 23 ಆಗಸ್ಟ್ 2025, 18:35 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕ್ರೀಡಾಪಟುಗಳು ಸ್ವಲ್ಪ ಶ್ರಮವಹಿಸಿ ಅಭ್ಯಾಸಿಸಿದರೆ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸು ಲಭಿಸುವುದು. ಕೆಲವು ದಿನಗಳಿಂದ ಮುಂದೂಡಿದ್ದ ವಿದೇಶ ಪ್ರಯಾಣವನ್ನು ಮತ್ತೆ ಕೈಗೊಳ್ಳುವ ಬಗ್ಗೆ ಯೋಚಿಸಿ. ಶ್ರೀ ನವಗ್ರಹ ಆರಾಧನೆ ಶುಭವನ್ನು ಉಂಟುಮಾಡುತ್ತದೆ.
23 ಆಗಸ್ಟ್ 2025, 18:35 IST
ವೃಷಭ
ಸಾಕು ಪ್ರಾಣಿಗಳಿಂದ ತೊಂದರೆಗಳು ಸಂಭವಿಸಬಹುದು. ಪಶು ವೈದ್ಯರು, ಪ್ರಾಣಿ ಸಂಗ್ರಹಾಲಯದವರು ಹೆಚ್ಚು ಜಾಗರೂಕತೆಯಿಂದ ಕಾರ್ಯನಿರ್ವಹಿಸಿ. ಕೌಟುಂಬಿಕ ಸಮಸ್ಯೆಗಳು ಹೊಸದೊಂದು ಆಯಾಮ ಪಡೆಯಲಿದೆ.
23 ಆಗಸ್ಟ್ 2025, 18:35 IST
ಮಿಥುನ
ಉತ್ಸಾಹಭರಿತವಾದ ಕಾರ್ಯಾಸಕ್ತಿಯನ್ನು ಹೊಂದಿರುವ ನಿಮಗೆ ಇಂದು ವಿಘ್ನಗಳು ಎದುರಾದರೂ, ಮುಂದಿನ ದಿನಗಳಲ್ಲಿ ಕಾರ್ಯ ಸಂಪೂರ್ಣವಾಗುವುದು. ಪ್ರವೃತ್ತಿಯಿಂದ ಹಣ ಸಂಪಾದನೆಯಾಗುವುದು ಸಂತೋಷವನ್ನು ಉಂಟುಮಾಡಲಿದೆ.
23 ಆಗಸ್ಟ್ 2025, 18:35 IST
ಕರ್ಕಾಟಕ
ರಾಜಕೀಯ ವರ್ಗದವರು ಜನ ಮನ್ನಣೆ ಪಡೆದುಕೊಂಡು ಉತ್ತಮ ಫಲಗಳನ್ನು ಹೊಂದಲಿದ್ದಾರೆ. ಎಲ್ಲರೂ ನನ್ನಂತೆಯೇ ಇರಬೇಕೆಂಬ ನಿಮ್ಮ ಮನೋಭಾವವು, ನಿಮ್ಮ ಮನಸ್ಥಿತಿಯನ್ನು ಹಾಳುಮಾಡಲಿದೆ.
23 ಆಗಸ್ಟ್ 2025, 18:35 IST
ಸಿಂಹ
ಕುಟುಂಬದ ಕಿರಿಯ ಸೋದರನಿಗೆ ವಿವಾಹ ನಿಶ್ಚಯವಾಗುವುದು. ಅನಿರೀಕ್ಷಿತವಾಗಿ ಸಂತೋಷದ ಕ್ಷಣಗಳು ಈ ದಿನ ಬರಲಿದೆ.ಯಾವುದೇ ರೀತಿಯ ಕಾಗದ ಪತ್ರಗಳಿಗೆ ಸಹಿಯನ್ನು ಹಾಕದಿರಿ.
23 ಆಗಸ್ಟ್ 2025, 18:35 IST
ಕನ್ಯಾ
ಮಕ್ಕಳು ಸಣ್ಣವರಾದಾಗಲೇ ಸರಿ ತಪ್ಪುಗಳ ತಿಳುವಳಿಕೆ ಹೇಳಿಕೊಡುವುದು ಪೋಷಕರ ಕರ್ತವ್ಯ ಆದ್ದರಿಂದ ತಿಳಿಹೇಳುವ ಜವಾಬ್ದಾರಿ ಈ ದಿನ ನಿಮಗೆ ಅನಾವಶ್ಯಕವಾಗಿರುತ್ತದೆ. ನಿಮ್ಮ ವಾಸಸ್ಥಾನ ಬದಲಾಗುವ ಲಕ್ಷಣಗಳಿವೆ.
23 ಆಗಸ್ಟ್ 2025, 18:35 IST
ತುಲಾ
ಇನ್ನೊಬ್ಬರ ಭಾವನೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಕೆಲಸಗಳು ಎಷ್ಟು ಕಷ್ಟವಾದರೂ ಹಿಂತಿರುಗುವ ಯೋಚನೆಯನ್ನು ಮಾಡಬೇಡಿ. ಇಂಧನ ಮಾರಾಟಗಾರರಿಗೆ ಅನುಕೂಲಕರ ದಿನ.
23 ಆಗಸ್ಟ್ 2025, 18:35 IST
ವೃಶ್ಚಿಕ
ಸಿವಿಲ್ ಎಂಜಿನಿಯರ್‌ಗಳಿಗೆ ಬೃಹತ್ ವಾಣಿಜ್ಯ ಮಳಿಗೆಯ ಕಾರ್ಯಭಾರ ಸಿಗಬಹುದು. ಹಣದ ವಿಚಾರದಲ್ಲಿ ಸ್ಥಿರ ವರಮಾನದ ಬಗ್ಗೆ ಯೋಚನೆಯನ್ನು ಮಾಡಿ. ಈ ದಿನ ನಿಮಗೆ ಸುಖ-ದುಃಖದ ಮಿಶ್ರಫಲ ಅನುಭವಕ್ಕೆ ಬರಲಿದೆ.
23 ಆಗಸ್ಟ್ 2025, 18:35 IST
ಧನು
ಉನ್ನತ ಪೋಲಿಸ್ ಅಧಿಕಾರಿಗಳು ಜವಾಬ್ದಾರಿಗಳನ್ನು ನಿಭಾಯಿಸಲು ಸಿದ್ಧರಾಗಬೇಕಾಗಲಿದೆ. ಈಶ್ವರನ ಆರಾಧನೆಯು ಕೋರ್ಟ್ ವ್ಯವಹಾರಗಳಲ್ಲಿ ನಿಮ್ಮ ವಿಚಾರಕ್ಕೆ ಯಶಸ್ಸನ್ನು ತಂದು ಕೊಡುವುದು. ಮುದ್ರಣ ವೃತ್ತಿಯವರಿಗೆ ಉತ್ತಮ ಲಾಭ.
23 ಆಗಸ್ಟ್ 2025, 18:35 IST
ಮಕರ
ರಾಜಕಾರಣಿಗಳು ನಿರ್ಲಿಪ್ತವಾಗಿರುವ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ವೈದ್ಯಕೀಯ ವೃತ್ತಿ ನಡೆಸುವವರಿಗೆ ಆಶ್ಚರ್ಯಕರವಾದ ಅನುಭವ ಸಿಗಲಿದೆ. ಹೊಸ ಬಟ್ಟೆ ಖರೀದಿಸುವ ಯೋಗವಿದೆ.
23 ಆಗಸ್ಟ್ 2025, 18:35 IST
ಕುಂಭ
ಅಪವಾದದ ಭೀತಿಗೆ ಒಳಗಾಗದಿರಿ. ಮುಖ್ಯವಾಗಿ ನಿಮ್ಮದಲ್ಲದ ವಸ್ತು, ವಿಚಾರಗಳನ್ನು ನೀವು ಅಪೇಕ್ಷಿಸುವುದು ನಿಮ್ಮ ಸಣ್ಣತನವಾಗುವುದು. ಮಗನ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ಹರಿಸಿ. ದಿನ ಕೂಲಿ ನೌಕರರಿಗೆ ಸಂಬಳದಲ್ಲಿ ಹೆಚ್ಚಳ ಕಂಡುಬರಲಿದೆ.
23 ಆಗಸ್ಟ್ 2025, 18:35 IST
ಮೀನ
ಇತರರು ನಿಮ್ಮ ಪ್ರತಿಭೆಯನ್ನು ಗುರುತಿಸುವ ಕಾಲ ಹತ್ತಿರವಿದೆ. ಸಾಲಗಳಿಂದ ದೂರವಾಗುವ ವಿಚಾರದ ಬಗ್ಗೆ ಗಮನ ಹರಿಸಿ. ಹೊಸದಾಗಿ ಹಣ ಹೂಡಿಕೆ ಮಾಡುವಾಗ ಪರಿಶೀಲನೆ ಅಗತ್ಯ. ಆರೋಗ್ಯದಲ್ಲಿ ಉದಾಸೀನತೆ ತೋರದಿರಿ.
23 ಆಗಸ್ಟ್ 2025, 18:35 IST