ಥಿಂಪು: ಅನುಷ್ಕಾ ಕುಮಾರಿ ಅವರ ಹ್ಯಾಟ್ರಿಕ್ ಗೋಲುಗಳ (53ನೇ ನಿ., 61ನೇ ನಿ. ಹಾಗೂ 73ನೇ ನಿ.) ನೆರವಿನಿಂದ ಭಾರತ ತಂಡವು ಇಲ್ಲಿ ನಡೆಯುತ್ತಿರುವ ಸ್ಯಾಫ್ 17 ವರ್ಷದೊಳಗಿನವರ ಮಹಿಳಾ ಫುಟ್ಬಾಲ್ ಚಾಂಪಿಯನ್ಷಿಪ್ ಪಂದ್ಯದಲ್ಲಿ ಆತಿಥೇಯ ಭೂತಾನ್ ತಂಡವನ್ನು ಭಾನುವಾರ 8–0 ಗೋಲುಗಳಿಂದ ಸುಲಭವಾಗಿ ಮಣಿಸಿತು. ಇದು ಭಾರತ ತಂಡಕ್ಕೆ ಸತತ ಮೂರನೇ ಜಯ.

ಮೊದಲಾರ್ಧದಲ್ಲಿ 1–0ಯಿಂದ ಮುನ್ನಡೆ ಗಳಿಸಿದ್ದ ಭಾರತ, ದ್ವಿತೀಯಾರ್ಧದಲ್ಲಿ ಗೋಲುಗಳ ಸುರಿಮಳೆಗೈದಿತು. ಅಭಿಷ್ತಾ ಬಸ್ನೆಟ್ (23ನೇ ನಿ., 89ನೇ ನಿ.) ಎರಡು ಗೋಲು ಹೊಡೆದರೆ, ಪರ್ಲ್ ಫೆರ್ನಾಂಡಿಸ್ (14ನೇ ನಿ.), ದಿವ್ಯಾ ಲಿಂಡಾ (77ನೇ ನಿ.) ಹಾಗೂ ವಲೈನಾ ಜೆ. ಫೆರ್ನಾಂಡಿಸ್ (90+2ನೇ ನಿ.) ತಲಾ ಒಂದು ಗೋಲು ಗಳಿಸಿದರು.

ಹ್ಯಾಟ್ರಿಕ್ ಗೆಲುವಿನೊಂದಿಗೆ ಭಾರತ ಒಂಬತ್ತು ಪಾಯಿಂಟ್ಸ್ ಸಂಗ್ರಹಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಟೂರ್ನಿಯಲ್ಲಿ ಭಾರತದ ವನಿತೆಯರು ಒಟ್ಟು 17 ಗೋಲುಗಳನ್ನು ಹೊಡೆದಿದ್ದು, ಎದುರಾಳಿ ತಂಡಕ್ಕೆ ಒಂದೂ ಗೋಲು ಬಿಟ್ಟುಕೊಟ್ಟಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.