ಗ್ರಾಮ ಪಂಚಾಯಿತಿ ಚುನಾವಣೆಯ ಪಾವಿತ್ರ್ಯ ಉಳಿಸಿ
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ತಮ್ಮ ತತ್ವ, ಸಿದ್ಧಾಂತಗಳ ಹುಳಿಯನ್ನು ಹಿಂಡಿ, ತಮ್ಮ ಪಕ್ಷಗಳ ಶಾಲುಗಳನ್ನು ಹೊದಿಸಿ ಗ್ರಾಮೀಣ ಭಾಗದ ಜನರಲ್ಲಿ ದ್ವೇಷ ರಾಜಕಾರಣದ ಬೀಜ ಬಿತ್ತುವ ಕಾಯಕ ಶುರು ಮಾಡಿವೆ.
ಈ ಚುನಾವಣೆಯಲ್ಲಿ ಯಾವುದೇ ಪಕ್ಷ ಮೂಗು ತೂರಿಸುವ ಕೆಲಸ ಮಾಡಬಾರದು. ಪ್ರಾಥಮಿಕ ಸಂಬಂಧಗಳೇ ಪ್ರಮುಖವಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಯ ಪಾವಿತ್ರ್ಯವನ್ನು ಉಳಿಸಲು ರಾಷ್ಟ್ರೀಯ ಪಕ್ಷಗಳು ಅಂತರ ಕಾಯ್ದುಕೊಳ್ಳುವುದು ಅತ್ಯವಶ್ಯಕ.
-ಬಾದಾಮಿ ಭಾಸ್ಕರ ನಾಯಕ, ಬಳ್ಳಾರಿ
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.