ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ದಂಡ ಪಾವತಿಸಲೇಬೇಕೆಂದು ಎಎಸ್‌ಐ ಪಟ್ಟು ಹಿಡಿದದ್ದರಿಂದ ಅದಕ್ಕೆ ಬೇಕಾದ ಹಣ ತರಲು ಪತಿ ಎಟಿಎಂಗೆ ತೆರಳಿದಾಗ ಪತ್ನಿ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಹಸುಗೂಸು ಸಿಗ್ನಲ್‌ನಲ್ಲೇ ತುಂತುರು ಮಳೆಯಲ್ಲಿ ನೆನೆಯುತ್ತಾ ಪರದಾಡಿದ ಪ್ರಕರಣ (ಪ್ರ.ವಾ., ನ. 4) ನಮ್ಮ ಪೊಲೀಸ್ ವ್ಯವಸ್ಥೆಯ ನಿಜಮುಖವನ್ನು ಬಿಚ್ಚಿ ಟ್ಟಿದೆ. ಸಿಗ್ನಲ್‌ನಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾ ಇರುವುದಿಲ್ಲವೇ? ಅದರಲ್ಲಿ ವಾಹನದ ಸಂಖ್ಯೆ ಕಾಣುವುದಿಲ್ಲವೇ? ಹಾಗಿದ್ದಾಗ ಈ ರೀತಿಯ ಕಿರುಕುಳ ಕೊಡಲು ಎಎಸ್‌ಐಗೆ ಹೇಗೆ ಮನಸ್ಸು ಬಂತು?

ಹೆಲ್ಮೆಟ್ ಧರಿಸದಿದ್ದುದಕ್ಕೆ ದಂಡ ಕಟ್ಟಿಸಿಕೊಳ್ಳುವುದು ಸರಿ. ಆದರೆ ತಕ್ಷಣವೇ ಅದನ್ನು ಕಟ್ಟಿಸಿಕೊಳ್ಳುವ ತರಾತುರಿ ಏನಿತ್ತು? ಹಸುಗೂಸನ್ನು ಮಳೆಯಲ್ಲೇ ನೆನೆಸಿಯಾದರೂ ದಂಡ ವಸೂಲಿ ಮಾಡಬೇಕೆನ್ನುವ ಹಟಮಾರಿ ಧೋರಣೆ ಏಕೆ ಬೇಕಿತ್ತು? ಇದು ಮಾನವೀಯತೆಯನ್ನೇ ಮರೆತಾದರೂ ಕರ್ತವ್ಯವನ್ನು ಮಾಡಬೇಕೆಂಬ ಅತಿರೇಕದ ವರ್ತನೆ. ಪೊಲೀಸ್ ತರಬೇತಿ ಸಂದರ್ಭದಲ್ಲಿ ಸ್ವಲ್ಪಮಟ್ಟಿಗೆ ಮಾನವೀಯತೆಯ ಪಾಠವನ್ನೂ ಕಲಿಸಿದ್ದರೆ ಒಳ್ಳೆಯದಿತ್ತೇನೊ.

-ಬಾಲಕೃಷ್ಣ ಎಂ.ಆರ್., ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.