ಗುರುವಾರ , ಆಗಸ್ಟ್ 11, 2022
23 °C

ಸೌರವಿದ್ಯುತ್‌ಗೆ ಇರಲಿ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆಹಲಿ ಸರ್ಕಾರ ತನ್ನ 150 ಸರ್ಕಾರಿ ಶಾಲಾ ಕಟ್ಟಡಗಳ ಮೇಲ್ಚಾವಣಿಗಳಲ್ಲಿ ಸೌರ ವಿದ್ಯುತ್‌ ವ್ಯವಸ್ಥೆ ಅಳವಡಿಸಿಕೊಂಡಿದೆ. ಈ ಕಾರ್ಯಕ್ಕೆ ಬೇಕಾಗುವ ಹಣವನ್ನು ಕೇಂದ್ರ ಸರ್ಕಾರದ ಯೋಜನೆಯಡಿಯಿಂದ ಪಡೆಯಲಾಗಿದೆ. ಇದರಿಂದ ಸುಮಾರು 21 ಮೆಗಾವಾಟ್ ಸೌರವಿದ್ಯುತ್ ಅನ್ನು ಉತ್ಪಾದನೆ ಮಾಡಲಾಗಿದೆ. ಇದರ ಪರಿಣಾಮವಾಗಿ, ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಉಳಿತಾಯವಾದುದಷ್ಟೇ ಅಲ್ಲ ಕೋಟ್ಯಂತರ ರೂಪಾಯಿ ಮೌಲ್ಯದ ಸೌರವಿದ್ಯುತ್ ಅನ್ನು ಮಾರಾಟ ಸಹ ಮಾಡಲಾಗಿದೆ. ಈ ಎಲ್ಲಾ ಶಾಲೆಗಳಲ್ಲಿ ರಿನಿವಲ್ ಎನರ್ಜಿ ಸರ್ವಿಸ್ ಕಂಪನಿಯ (ರೆಸ್ಕೊ) ಮಾದರಿಯಲ್ಲಿ ಶಾಲೆಗಳ ಮೇಲ್ಚಾವಣಿಯಲ್ಲಿ ಸೌರವಿದ್ಯುತ್‌ ವ್ಯವಸ್ಥೆ ಅಳವಡಿಸಲಾಗಿದೆ. ಸೌರವಿದ್ಯುತ್‌ ಬಳಕೆಯಿಂದ ಸಾಮಾನ್ಯ ವಿದ್ಯುತ್ ದರಕ್ಕಿಂತ ಶೇ 65ರಷ್ಟು ಕಡಿಮೆ ಪ್ರಮಾಣದ ಮಾಸಿಕ ವಿದ್ಯುತ್‌ ಶುಲ್ಕ ಬರುತ್ತದೆ.

ಕರ್ನಾಟಕದಲ್ಲಿ ಸಾವಿರಾರು ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳಿವೆ. ಇವೆಲ್ಲವುಗಳಿಂದ ಒಟ್ಟಾರೆ ಕೋಟ್ಯಂತರ ರೂಪಾಯಿ ವಿದ್ಯುತ್ ಶುಲ್ಕ ಬರುತ್ತದೆ. ಈ ಶಾಲೆಗಳಲ್ಲೂ ಸೌರವಿದ್ಯುತ್‌ ವ್ಯವಸ್ಥೆ ಅಳವಡಿಸಿದರೆ ಇಷ್ಟೆಲ್ಲಾ ಹಣ ಉಳಿಸಬಹುದಲ್ಲದೆ ಪರಿಸರ ಮಾಲಿನ್ಯವನ್ನೂ ತಗ್ಗಿಸಬಹುದು. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ.

–ವಿಜಯಕುಮಾರ್ ಎಚ್.ಕೆ., ರಾಯಚೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು