ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಆಶೀರ್ವಾದದ ಭಂಗಿ ಸರಿಯಲ್ಲ

Last Updated 13 ಜನವರಿ 2023, 19:30 IST
ಅಕ್ಷರ ಗಾತ್ರ

ವಿಧಾನಸೌಧದ ಮುಂಭಾಗದಲ್ಲಿ ಬಸವಣ್ಣ ಮತ್ತು ಕೆಂಪೇಗೌಡ ಅವರ ಪುತ್ಥಳಿಗಳ ಸ್ಥಾಪನೆಗೆ ಶಿಲಾನ್ಯಾಸ ಹಾಗೂ ಭೂಮಿಪೂಜೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರದ ಜಾಹೀರಾತು ಪ್ರಕಟವಾಗಿದ್ದು (ಪ್ರ.ವಾ., ಜ. 13), ಅದರಲ್ಲಿ ಬಸವಣ್ಣನವರ ಆಶೀರ್ವಾದದ ಭಂಗಿಯ ಚಿತ್ರ ಇದೆ. ಬಸವಣ್ಣನವರು ‘ಎನಗಿಂತ ಕಿರಿಯರಿಲ್ಲ ಶಿವಭಕ್ತರಿ ಗಿಂತ ಹಿರಿಯರಿಲ್ಲ’ ಎಂದು ಸಾರಿ ‘ಬಾಗಿದ ತಲೆ ಮುಗಿದ ಕೈಯಾಗಿಸು’ ಎಂದು ಕೂಡಲಸಂಗಮನಲ್ಲಿ ಬೇಡಿಕೊಂಡು ‘ವಿಶ್ವಗುರು’ವೆನಿಸಿದ್ದಾರೆ! ಅಂಥ ಸದ್ವಿನಯದ ಬಸವಣ್ಣನವರು ಯಾರಿಗೆ ಆಶೀರ್ವಾದ ಮಾಡಲು ಸಾಧ್ಯ?

ಕೆಲವು ಪವಾಡಪುರುಷರ ಆಶೀರ್ವಾದದ ಭಂಗಿಯಂತೆ ಬಸವಣ್ಣನವರನ್ನು ಚಿತ್ರಿಸಲು ಹೊರಡುವುದು ಅವರಿಗೆ, ಅವರ ತತ್ವಕ್ಕೆ ಎಸಗುವ ಅಪಚಾರವೇ ಸರಿ. ಇನ್ನು ಕೆಲವರು ಅವರನ್ನು ಕಾವಿ ಧರಿಸಿದಂತೆ ಚಿತ್ರಿಸುತ್ತಾರೆ. ಬಸವಣ್ಣನವರು ಸನ್ಯಾಸಿಯಾಗಿರದೆ ಸಂಸಾರಿಯಾಗಿದ್ದು, ಅಧ್ಯಾತ್ಮ ಸಾಧಕರಿಗೆ ಮಾದರಿಯಾಗಿದ್ದವರು ಎಂಬುದನ್ನು ನಾವು ಮರೆಯಬಾರದು.

–ಶಿವಕುಮಾರ ಬಂಡೋಳಿ, ಹುಣಸಗಿ, ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT