ಸೋಮವಾರ, ಅಕ್ಟೋಬರ್ 3, 2022
21 °C

ವಾಚಕರ ವಾಣಿ: ‘ಆಪರೇಷನ್ ಅಧಿಕಾರಿ’!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂವಿನಹಡಗಲಿ ತಾಲ್ಲೂಕು ಪಂಚಾಯಿತಿಗೆ ಕಾರ್ಯನಿರ್ವಾಹಕ ಅಧಿಕಾರಿಯನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿರುವ ಸುದ್ದಿ ಓದಿ ಆಘಾತವಾಯಿತು.

ಈ ನಡೆಯು ಆಡಳಿತ ವರ್ಗಕ್ಕೆ ಶೋಭೆ ತರುವಂತಹದ್ದಲ್ಲ. ಮುಂದಿನ ದಿನಗಳಲ್ಲಿ ಆಡಳಿತ ನಡೆಸುವ ಪಕ್ಷದ ಕಾರ್ಯಕರ್ತರಿಗೆ ಇಲಾಖೆಯ ಮುಖ್ಯಸ್ಥರ ಹುದ್ದೆಯನ್ನು ಗುತ್ತಿಗೆ ಮೂಲಕ ನೀಡಿದರೂ ಆಶ್ಚರ್ಯವಿಲ್ಲ. ಶಾಸಕರನ್ನು ಖರೀದಿಸಿ ‘ಆಪರೇಷನ್ ಕಮಲ’ದಿಂದ ಸರ್ಕಾರ ರಚಿಸಿದ್ದು ಹಳೆ ಸುದ್ದಿಯಾಗಿತ್ತು, ಈಗ ಸ್ವಹಿತಾಸಕ್ತಿಗಾಗಿ ‘ಆಪರೇಷನ್ ಅಧಿಕಾರಿ’ ಕೆಲಸ ನಡೆಯುತ್ತಿದೆ. ಭ್ರಷ್ಟಾಚಾರಕ್ಕೆ ಇನ್ನೂ ಎಷ್ಟು ಮುಖಗಳಿವೆಯೋ ಆ ದೇವರಿಗೇ ಗೊತ್ತು!

-ತಾ.ಸಿ.ತಿಮ್ಮಯ್ಯ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು