ಜನತಂತ್ರಕ್ಕೆ ವಿಷ ಉಣಬಡಿಸುವ ಹುನ್ನಾರ

ದೇಶದಲ್ಲಿ ಮತಗಳ್ಳತನದ ವಿವಾದಾತ್ಮಕ ಕಿಚ್ಚು ಇನ್ನೂ ಆರಿಲ್ಲ. ಈ ನಡುವೆ, ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಹೆಸರಿನಲ್ಲಿ 11.6 ಕೋಟಿ ಮತದಾರರ
ಹೆಸರನ್ನು ಪಟ್ಟಿಯಿಂದ ತೆಗೆದು ಹಾಕುವ ಕುರಿತು ಚರ್ಚೆಯಾಗುತ್ತಿದೆ. ಇದು
ಪ್ರಜಾತಂತ್ರಕ್ಕೆ ವಿಷ ಉಣಿಸುವ ಹುನ್ನಾರವಷ್ಟೆ. ದೇಶದ ಜನಸಂಖ್ಯೆಗೆ ಹೋಲಿಸಿದರೆ
ಇದು ಸಣ್ಣ ಸಂಖ್ಯೆ ಅಲ್ಲ! ಅಲ್ಲದೆ, ಮತದಾರರ ಹಕ್ಕಿನ ಪ್ರಶ್ನೆಯೂ ಆಗಿದೆ. ಕೇಂದ್ರ
ಚುನಾವಣಾ ಆಯೋಗದ ಮೇಲಿನ ಕಳಂಕ ಇನ್ನೂ ಮಾಸಿಲ್ಲ. ಅದರ ಇತ್ತೀಚಿನ ನಿರ್ಧಾರಗಳೂ ಸಮಂಜಸವಾಗಿಲ್ಲ. ಆಯೋಗ ನಿಷ್ಪಕ್ಷಪಾತವಾಗಿ ಕೆಲಸ ಮಾಡುವುದರ ಬಗ್ಗೆ ಜನರಲ್ಲಿ ಪ್ರಶ್ನೆಗಳಿವೆ. ಉತ್ತರ ಮಾತ್ರ ಶೂನ್ಯ.

–ಕಾಶೀನಾಥ ಎಸ್.ಎಂ., ಕಲಬುರಗಿ

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು

ಸಮಾಜದಲ್ಲಿ ಹೆಣ್ಣಿಗೆ ದೈವಿಕ ಸ್ಥಾನ ನೀಡಿದ್ದೇವೆ. ಕುಟುಂಬದಿಂದ ಹಿಡಿದು ರಾಷ್ಟ್ರ ನಿರ್ಮಾಣದಲ್ಲೂ ಮಹಿಳೆಯರ ಪಾತ್ರವಿದೆ. ಆದರೆ, ಮಹಿಳೆಯರ ಮೇಲಿನ ದೌರ್ಜನ್ಯಗಳು ಕಡಿಮೆಯಾಗಿಲ್ಲ. ಪ್ರತಿದಿನವೂ ಅತ್ಯಾಚಾರ, ಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಾಗ ಮೇಣದಬತ್ತಿ ಹಚ್ಚಿಕೊಂಡು ಮೆರವಣಿಗೆ ಮಾಡುವುದು ನಡೆಯುತ್ತಿದೆ. ಆದರೆ, ದೌರ್ಜನ್ಯದ ಮನಸ್ಸುಗಳನ್ನು ಸುಟ್ಟು ಹಾಕುವ ಕೆಲಸವಂತೂ ನಡೆಯುತ್ತಿಲ್ಲ. ಪರಿಚಿತರೇ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವುದು ನಡೆಯುತ್ತಿದೆ. ಸರ್ಕಾರವು ಕಾಮುಕರ ಬಂಧನಕ್ಕಷ್ಟೇ ಸೀಮಿತವಾಗಬಾರದು. ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿದರಷ್ಟೇ ದೌರ್ಜನ್ಯಗಳಿಗೆ ಕಡಿವಾಣ ಬೀಳಲಿದೆ.

–ಭಾಸ್ಕರ ಸುಧೀಂದ್ರ, ಬಾಗಲಕೋಟೆ

ಯುವಜನರ ಧ್ವನಿಗೆ ಸೂಕ್ತ ವೇದಿಕೆ ಅಗತ್ಯ

ಗ್ರಾಮೀಣ ಪ್ರದೇಶದ ಯುವಜನರು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಉದ್ಯೋಗ ಮತ್ತು ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಅವರ ಭವಿಷ್ಯ ಅಡಕತ್ತರಿಗೆ ಸಿಲುಕಿದೆ. ಹಳ್ಳಿಗಳಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ. ಯುವಜನರ ಸಮಸ್ಯೆ ಹೇಳಿಕೊಳ್ಳಲು ಸೂಕ್ತ ವೇದಿಕೆ ಸಿಗುತ್ತಿಲ್ಲ. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ನಿಯಮಿತವಾಗಿ ಯುವಜನ ಗ್ರಾಮಸಭೆ ನಡೆಸಿದರೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳು ಈ ದಿಸೆಯಲ್ಲಿ ಹೆಜ್ಜೆ ಇಡಬೇಕಿದೆ.

–ಎಲ್. ಹುಲುಗಪ್ಪ, ಹೊಸಪೇಟೆ

ಸಮರ್ಥನೆ ಹೆಸರಿನಲ್ಲಿ ಅಸಭ್ಯತೆ ಸರಿಯೆ?

ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಮುಸ್ಲಿಂ ಮಹಿಳೆಯೊಬ್ಬರು ಮುಖಕ್ಕೆ ಧರಿಸಿದ್ದ ನಖಾಬ್ ಎಳೆದಿದ್ದು ವಿವಾದಕ್ಕೆ ಕಾರಣವಾಗಿದೆ. ಇದರ ಸಮರ್ಥನೆ ಭರದಲ್ಲಿ ಉತ್ತರ ಪ್ರದೇಶದ ಸಚಿವರೊಬ್ಬರು ಪ್ರಚೋದನಕಾರಿಯಾಗಿ ಪ್ರತಿಕ್ರಿಯಿಸಿದ್ದಾರೆ. ಸಂವಿಧಾನವು ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕು ನೀಡಿದೆ. ಈ ಪ್ರಕರಣವು ಮಹಿಳೆಯರ ಘನತೆಗೆ ಧಕ್ಕೆ ತಂದಿದೆ. ಇದು ರಾಜಕೀಯ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ಪಿತೃಪ್ರಧಾನ ಮತ್ತು ಸ್ತ್ರೀವಿರೋಧಿ ಮನೋಭಾವದ ಪ್ರತಿಬಿಂಬವೂ ಹೌದು. ಮಹಿಳೆಯರ ಘನತೆಯನ್ನು ಬರೀ ಭಾಷಣಗಳಲ್ಲಿ ಎತ್ತಿ ಹಿಡಿದರೆ ಸಾಲದು; ಅದು ನಡೆ ಮತ್ತು ನುಡಿ ಎರಡ ರಲ್ಲೂ ಇರಬೇಕು. ಇಂತಹ ಘಟನೆಗಳ ವಿರುದ್ಧ ಪಕ್ಷಾತೀತವಾಗಿ ಧ್ವನಿ ಎತ್ತಬೇಕಿದೆ.

–ಭೂಮಿಕಾ ವಿ., ಕೋಲಾರ

ಸಂಕುಚಿತ ಚಿಂತನೆಯಿಂದ ಯಾರಿಗೆ ಹಿತ?

‘ಮೆಕಾಲೆ ಅಪ್ರಸ್ತುತ, ಏಕೆಂದರೆ...’ ಲೇಖನವು (ಲೇ: ಎ. ಸೂರ್ಯ ಪ್ರಕಾಶ್, ಪ್ರ.ವಾ., ಡಿ. 20) ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ಹುಟ್ಟಿರುವುದಾಗಿದೆ. ಸಂಸ್ಕೃತದಲ್ಲಿ ಮಾತ್ರವೇ ಜ್ಞಾನವಿತ್ತು, ಅಷ್ಟೇ ಸಾಕಾಗಿತ್ತು ಎಂಬುದು ಅವರ
ರಾಷ್ಟ್ರೀಯಪ್ರಜ್ಞೆಯ ಗತವಾದಿ ನಿಲುವು ಮೆಕಾಲೆ ನಿಲುವಷ್ಟೇ ಸಂಕುಚಿತ ಅಲ್ಲವೇ?

‘ಕಾನ್ವೆಂಟ್ ಶಾಲೆಗಳು’ ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದು, ಬ್ರಿಟಿಷ್ ವಸಾಹತುಶಾಹಿ ಆಡಳಿತದ ಕಾಲದಲ್ಲೋ? ನವವಸಾಹತುಶಾಹಿಯ ಕಾಲವೆಂದು ಕರೆಯಲಾಗುತ್ತಿರುವ ಜಾಗತೀಕರಣದ ಪರಿಣಾಮವಾಗಿಯೋ? ‘ಮೆಕಾಲೆ ಶಿಕ್ಷಣದ ಹಾನಿ’ಯ ಬಗ್ಗೆ ಹೇಳುವ ಪ್ರಧಾನಿ ಮೋದಿಯವರ ಪಕ್ಷ– ಸಿದ್ಧಾಂತವು, ರಾಷ್ಟ್ರೀಯತೆ ಹೆಸರಿನಲ್ಲಿ ಶಿಕ್ಷಣವನ್ನು ಕೇಸರೀಕರಣ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪದಾಚೆಗೆ ರೂಪಿಸಿರುವ ರಚನಾತ್ಮಕ ಯೋಜನೆಗಳೇನು? ಪರಿಣತರು ಬಯಸುತ್ತಿರುವಂತೆ, ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಿ ಆಯಾ ನಾಡಿನ ಭಾಷೆಯಲ್ಲಿ ಮಕ್ಕಳು ಶಿಕ್ಷಣ ಪಡೆಯುವಂತೆ ಮಸೂದೆ ಮಂಡಿಸಿ, ಮಹತ್ವಾಕಾಂಕ್ಷೆಯ ಶಾಸನವನ್ನೇಕೆ ಜಾರಿಗೆ ತರಬಾರದು? ಈ ಬಗ್ಗೆ ಪ್ರಧಾನಿಗೆ ಇಚ್ಛಾಶಕ್ತಿ ಇದೆಯೇ?

–ದೊಡ್ಡಿಶೇಖರ್, ಆನೇಕಲ್

ಬಿಎಲ್ಒ ಹೊರೆಗೆ ಬಸವಳಿದ ಶಿಕ್ಷಕರು

ಬೆಳಗಾವಿ ಅಧಿವೇಶನದಲ್ಲಿ ಬಿಎಲ್ಒ ಕೆಲಸಕ್ಕೆ ಶಿಕ್ಷಕರನ್ನು ನಿಯೋಜಿಸದಂತೆ ಚರ್ಚಿಸಲಾಯಿತು. ಆದರೂ, ಶಿಕ್ಷಣ ಸಚಿವರು ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಎನ್ಜಿಒ ಮೂಲಕ ಬಿಎಲ್ಒ ಕೆಲಸ ಮಾಡಿಸುವ ಅವಕಾಶವಿದ್ದರೂ ಶಿಕ್ಷಕರನ್ನೇ ನಿಯೋಜಿಸಲಾಗುತ್ತಿದೆ. ಇನ್ನೊಂದೆಡೆ, ಚುನಾವಣಾ ಆಯೋಗ ಎಸ್ಐಆರ್ ನಡೆಸುತ್ತಿರುವುದರಿಂದ ಬಿಎಲ್ಒ ಆಗಿರುವ ಶಿಕ್ಷಕರು ಒತ್ತಡಕ್ಕೆ ಸಿಲುಕಿದ್ದಾರೆ. ಇದು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ, ಶಿಕ್ಷಕರನ್ನು ಈ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿ ಎನ್ಜಿಒಗಳಿಗೆ ವಹಿಸುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ.

– ಹರೀಶ್, ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.