ಭಾನುವಾರ, ಜೂಲೈ 12, 2020
23 °C

ರೈತನ ಪ್ರಾಮಾಣಿಕತೆ ಪ್ರಶಂಸನೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇವಲ 3 ರೂಪಾಯಿ 46 ಪೈಸೆ ಸಾಲದ ಹಣಕ್ಕಾಗಿ ಶಿವಮೊಗ್ಗ ಜಿಲ್ಲೆ ಹೊಸನಗರದ ನಿಟ್ಟೂರು ಸಮೀಪದ ಅಮಡೆ ಗ್ರಾಮದ ರೈತ ಲಕ್ಷ್ಮಿನಾರಾಯಣ ಅವರೊಂದಿಗೆ ಕೆನರಾ ಬ್ಯಾಂಕ್ ಸಿಬ್ಬಂದಿಯು ನಡೆದುಕೊಂಡ ರೀತಿ ಸರಿಯಲ್ಲ. ಬ್ಯಾಂಕ್‌ಗಳಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದು ಮರುಪಾವತಿಸದೆ ವಿದೇಶಕ್ಕೆ ಪರಾರಿಯಾದವರಿದ್ದಾರೆ. ಹೀಗಿರುವಾಗ, ಕೊರೊನಾ ಲಾಕ್‌ಡೌನ್ ಕಾರಣ ಸಾರಿಗೆ ಸೌಲಭ್ಯವಿಲ್ಲದಿದ್ದರೂ ತಮ್ಮ ಗ್ರಾಮದಿಂದ 15 ಕಿ.ಮೀ. ನಡೆದುಬಂದು ಅತ್ಯಲ್ಪ ಮೊತ್ತದ ಹಣ ಪಾವತಿಸಿದ ರೈತನ ಪ್ರಾಮಾಣಿಕತೆ ಪ್ರಶಂಸನೀಯ.

–ವಡ್ನಾಳ್ ರಮೇಶ, ಚನ್ನಗಿರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು