ಸೋಮವಾರ, ಆಗಸ್ಟ್ 2, 2021
27 °C

ದೈಹಿಕ ಶಿಕ್ಷಣ: ಮರೆತದ್ದೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರವು ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ಒದಗಿಸಿ, 2008ರಿಂದ ಇತರ ವಿಷಯಗಳ ಹಾಗೆ ಪಾಠ ಬೋಧನೆ ಮಾಡಿಸಿ, ಪರೀಕ್ಷೆ ನಡೆಸಿ, ಅಂಕಪಟ್ಟಿಯಲ್ಲಿ ಅಂಕಗಳನ್ನು ದಾಖಲಿಸುತ್ತಿದೆ. ತಾತ್ವಿಕ ಪಾಠಗಳನ್ನು ತರಗತಿ ಕೋಣೆಯಲ್ಲಿಯೂ ಪ್ರಾಯೋಗಿಕ ಪಾಠಗಳನ್ನು ಮೈದಾನದಲ್ಲಿಯೂ ನಡೆಸಲಾಗುತ್ತದೆ.

ಪ್ರಸ್ತುತ ಮಕ್ಕಳಿಗೆ ‘ಚಂದನ’ ವಾಹಿನಿಯಲ್ಲಿ ದೈಹಿಕ ಶಿಕ್ಷಣದ ತಾತ್ವಿಕ ಪಾಠ ಬೋಧನೆಗೆ ಕಾರ್ಯಯೋಜನೆ ರೂಪಿಸದ ಕಾರಣ ಆರೋಗ್ಯ, ಯೋಗ, ಮೌಲ್ಯಶಿಕ್ಷಣ ಮತ್ತು ಆಟಗಳ ವಿಷಯವಾಗಿ ಪಡೆಯಬಹುದಾದ ಬೌದ್ಧಿಕ ಜ್ಞಾನದ ಕಲಿಕೆಯಿಂದ ಅವರು ವಂಚಿತರಾಗಲಿದ್ದಾರೆ. ಚಂದನ ವಾಹಿನಿಯಲ್ಲಿ ಬರುತ್ತಿ ರುವ ಇತರ ಪಾಠಗಳ ಪಟ್ಟಿಯಲ್ಲಿ ದೈಹಿಕ ಶಿಕ್ಷಣದ ಕಾರ್ಯಕ್ರಮವನ್ನೂ ಅಳವಡಿಸಲು ಮುಂದಾಗಬೇಕು.

–ಜಿ.ಪಳನಿಸ್ವಾಮಿ ಜಾಗೇರಿ, ಸೂರಾಪುರ, ಕೊಳ್ಳೇಗಾಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.