ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಬೆಂಗಳೂರಿನ ದೊಡ್ಡ ಗಣಪತಿ ಸಮೂಹ ದೇವಸ್ಥಾನಗಳ ಆವರಣದಲ್ಲಿ ಚಪ್ಪಲಿ ಕಾಯ್ದುಕೊಳ್ಳುವ ಕೆಲಸವನ್ನು ದಲಿತರಿಗೆ ಮೀಸಲಿಟ್ಟ ಸುದ್ದಿ (ಪ್ರ.ವಾ., ನ. 2) ತಿಳಿದು ಬೇಸರವಾಯಿತು. ಬಹಿರಂಗ ಹರಾಜು ಪ್ರಕಟಣೆಯಲ್ಲಿ ಈ ರೀತಿ ಒಂದು ವರ್ಗಕ್ಕೆ ಮಾತ್ರ ಇಂತಹ ಕೆಲಸ ಎಂದು ನಿಗದಿಪಡಿಸಿದ್ದು ದುರದೃಷ್ಟಕರ. ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಸಾಮಾಜಿಕವಾಗಿ ಪರಿಶಿಷ್ಟರನ್ನು ಅವಮಾನಿಸುವಂಥ ಈ ರೀತಿಯ ಮೀಸಲು ಪ್ರಕ್ರಿಯೆಯ ವಿಷಯ ಬಹಿರಂಗ ಆಗಿದೆ! ಇದು, ಖಂಡನೀಯ. ಇಂತಹ ವ್ಯವಸ್ಥೆಯನ್ನು ಸರಿಪಡಿಸಲು ಮುಜರಾಯಿ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು.