ಪ್ರಾದೇಶಿಕ ಭಾಷೆಗಳಿಗೆ ವಿರುದ್ಧವಾದ ನಡೆ
ಭಾಷೆಯು ಜನರ ಸಂಸ್ಕೃತಿ ಮತ್ತು ಸಂಪ್ರದಾಯಗಳೊಂದಿಗೆ ನಿಕಟ ಸಂಬಂಧ ಹೊಂದಿರುತ್ತದೆ. ಜನಸಾಮಾನ್ಯರ ಭಾಷೆಯಲ್ಲಿ ರಾಜಕಾರಣ ಮತ್ತು ಆಡಳಿತ ನಡೆದಾಗ ಪ್ರಜಾಪ್ರಭುತ್ವಕ್ಕೆ ನೈಜ ಸ್ವರೂಪ ಲಭಿಸುತ್ತದೆ. ಆದರೆ
ಇತ್ತೀಚೆಗೆ ನಡೆದ ಭಾಷಾ ಸಂಸದೀಯ ಸಮಿತಿ ಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯವಾಗಿ ಬಳಸಬೇಕು ಎಂದು ಹೇಳಿದ್ದಾರೆ. ‘ಒಂದು ದೇಶ ಒಂದು ಚುನಾವಣೆ’ ಎಂಬಂತೆ, ಇದು ‘ಒಂದು ದೇಶ ಒಂದು ಭಾಷೆ’ ಎಂಬ ಹಾದಿಯಲ್ಲಿ ಸಾಗುತ್ತಿದೆ. ಪ್ರಾದೇಶಿಕ ಭಾಷೆಗಳಿಗೆ ವಿರುದ್ಧವಾದ ಈ ನಡೆ ಹಿಂದಿಯೇತರ ರಾಜ್ಯಗಳ ಮೇಲೆ ಮಾಡುವ ಸಾಂಸ್ಕೃತಿಕ ದಬ್ಬಾಳಿಕೆ.
ಭಾರತವು ಒಂದು ವೈವಿಧ್ಯಮಯ ರಾಷ್ಟ್ರ. ಅದನ್ನು ಭಾಷೆಯಲ್ಲೂ ಕಾಣಬಹುದು. ಲಡಾಖಿ, ಕಾಶ್ಮೀರಿ, ಪಂಜಾಬಿ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳು ಉತ್ತರ ಭಾರತದಲ್ಲಿ ಇದ್ದರೆ, ಕನ್ನಡ, ಮರಾಠಿ,
ತಮಿಳು, ತೆಲುಗು, ಮಲಯಾಳಂನಂತಹ ಭಾಷೆಗಳು ದಕ್ಷಿಣ ಭಾರತದಲ್ಲಿವೆ. ಹೀಗಿರುವಾಗ ಹಿಂದಿ ಭಾಷೆಯನ್ನು ಹೇರುವುದು ಎಷ್ಟರಮಟ್ಟಿಗೆ ಸರಿ ಎಂಬುದು ಯೋಚಿಸಬೇಕಾದ ಸಂಗತಿ. ಹಿಂದಿ ಹೇರಿಕೆ ನಿಲ್ಲಲಿ, ಎಲ್ಲ ಭಾಷೆಗಳೂ ಬಲಗೊಳ್ಳಲಿ.
ಆದರ್ಶ ಖೋತ, ಅನಂತಪುರ, ಅಥಣಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.