ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸ ಪದ ಬಳಕೆ ನಕಾರಾತ್ಮಕವಲ್ಲ

Last Updated 18 ಜನವರಿ 2021, 20:15 IST
ಅಕ್ಷರ ಗಾತ್ರ

‘ಕನಕದಾಸರಿಗೆ ದಾಸ ಎಂಬ ಪದ ಬಳಕೆ ಬೇಡ, ಕನಕ ವ್ಯಾಸ ಅಥವಾ ಕನಕರು ಎಂದರೆ ಸಾಕು’ ಎಂದು ಚಿಂತಕ ಪ್ರೊ. ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟಿದ್ದಾರೆ (ಪ್ರ.ವಾ., ಜ. 18). ಅವರಿಗೆ ಇಂತಹ ಭಾವನೆ ಏಕೆ ಬಂತೋ ಗೊತ್ತಾಗಲಿಲ್ಲ. ಇಲ್ಲಿ ಕನಕದಾಸ ಎಂದರೆ ದಾಸ ಸಾಹಿತ್ಯದಲ್ಲಿ ಪಾಂಡಿತ್ಯ ಹೊಂದಿರುವ ವ್ಯಕ್ತಿ. ತನ್ನ ದಾಸರಪದ ಪಾಂಡಿತ್ಯದಿಂದ ಸಮಾಜಕ್ಕೆ ಒಳಿತಾಗಲಿ ಎಂದು ಬಯಸುವವರು. ಅದೇ ರೀತಿ ಪುರಂದರದಾಸ.

ಕನಕ ದಾಸ, ಪುರಂದರ ದಾಸ (ಎರಡು ಪದಗಳ ಮಧ್ಯೆ ಅಂತರ) ಅಂದರೆ ಬೇರೆ ಅರ್ಥ ಬರುತ್ತದೆ. ದಾಸ ಎಂಬ ಪದದ ಅರ್ಥವು ಬಳಕೆ ಮಾಡುವ ಜನರ ಮನೋಭಾವವನ್ನು ಅವಲಂಬಿಸಿರುತ್ತದೆ. ದಾಸೋಹ, ದಾಸರಪದ ಇವೆಲ್ಲ ಸೇವೆಯಲ್ಲಿ ಬಳಸುವ ಪದಗಳಾಗಿವೆ. ದಾಸೋಹದಲ್ಲಿ ಹಸಿದವರಿಗೆ ಅನ್ನ ನೀಡುವ ಕಾರ್ಯವು (ಸೇವೆ), ದಾಸರಪದಗಳಲ್ಲಿ ಜನರಲ್ಲಿ ತಿಳಿವಳಿಕೆ ಹೆಚ್ಚಿಸುವ ಕಾಯಕ (ಸೇವೆ) ಆಗಿರುತ್ತದೆ. ಇಂತಹುದನ್ನು ನಾವು ಸಕಾರಾತ್ಮಕವಾಗಿ ನೋಡಬೇಕೇ ಹೊರತು ನಕಾರಾತ್ಮಕವಾಗಿ ಅಲ್ಲ.

ಗೊಡಬನಹಾಳ್ ಮಲ್ಲಿಕಾರ್ಜುನ,ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT