ಬೇಡಿಕೆಗಳನ್ನು ಮುಂದಿಟ್ಟು ಸಂವಿಧಾನಬದ್ಧವಾಗಿ ಪ್ರತಿಭಟಿಸುವ ಅವಕಾಶ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇ ಇದೆ. ಅಂತೆಯೇ ಪ್ರತಿಭಟನೆಗೆ ಬಹಳಷ್ಟು ಮಾರ್ಗಗಳಿವೆ. ಲೋಕಪಾಲ ಜಾರಿಗಾಗಿ ಅಣ್ಣಾ ಹಜಾರೆಯವರು ಗಾಂಧೀಜಿ ಕಲಿಸಿದ ಹಾದಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆಸಿದ ಹೋರಾಟ, ಅದಕ್ಕೆ ದೊರೆತ ಜನಬೆಂಬಲ ಅಪ್ರತಿಮವಾದದ್ದು. ತೊಂದರೆ ಯಾರಿಂದ ಆಗಿದೆಯೋ ಅವರಿಗೆ ಘೇರಾವ್ ಹಾಕಬಹುದು, ಆಮರಣಾಂತ ಉಪವಾಸ ಸತ್ಯಾಗ್ರಹ ಕೂರಬಹುದು, ಕಪ್ಪುಪಟ್ಟಿ ಧರಿಸುವುದು, ಮೌನಾಚರಣೆ ಸೇರಿದಂತೆ ಹಲವು ವಿಧಗಳಲ್ಲಿ
ಪ್ರತಿಭಟನೆಗಳನ್ನು ನಡೆಸಬಹುದು.

ಆದರೆ ಇಂತಹ ಮಾರ್ಗಗಳೆಲ್ಲವನ್ನೂ ಬಿಟ್ಟು ‘ಬಂದ್’ಗೆ ಕರೆ ಕೊಡುವುದರಿಂದ ಯಾರದೋ ವೈಯಕ್ತಿಕ ಹಿತಾಸಕ್ತಿ, ಯಾವುದೋ ಪಕ್ಷ ಅಥವಾ ಸಂಘಟನೆಗಳ ಹಿತಾಸಕ್ತಿಗಾಗಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದಂತೆ ಆಗುತ್ತದೆ. ಹೀಗಾಗಿ ಬಂದ್ ಕರೆಯನ್ನು ಮಾನವೀಯ ನೆಲೆಗಟ್ಟಿನಲ್ಲಿ ಎಲ್ಲರೂ ವಿರೋಧಿಸಬೇಕಿದೆ. ಬಂದ್‌ಗಳ ನೇತೃತ್ವ ವಹಿಸಿಕೊಳ್ಳುವವರು ಬಂದ್‌ನಿಂದ ಆಗುವ ಆ ದಿನದ ಸಂಪೂರ್ಣ ನಷ್ಟವನ್ನು ಭರಿಸುವಂತೆ ನೋಡಿಕೊಳ್ಳಬೇಕು. ಇಂತಹ ಕಟ್ಟುನಿಟ್ಟಾದ ನಿಯಮವನ್ನು ಜಾರಿ ಮಾಡುವ ಧೈರ್ಯವನ್ನು ನಮ್ಮ ಸರ್ಕಾರಗಳು ತೋರಲಿ. ಇಲ್ಲವಾದಲ್ಲಿ ಬಂದ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಿ.

ಸಾಸ್ವೆಹಳ್ಳಿ ನಾಗರಾಜ್, ಹೊನ್ನಾಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.