ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲಿಗೆ ಹರಿಬಿಡುವ ಕೆಟ್ಟ ಚಾಳಿ

Last Updated 11 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ವಿರೋಧ ಪಕ್ಷದ
ನಾಯಕರೊಬ್ಬರನ್ನು ಟೀಕಿಸುವಾಗ ಆಕ್ಷೇಪಾರ್ಹ ಪದ ಬಳಸಿರುವುದು, ರಾಜಕಾರಣದಲ್ಲಿ ಮೌಲ್ಯಗಳು ಕುಸಿದಿರು ವುದನ್ನು ತೋರಿಸುತ್ತದೆ. ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ಈಶ್ವರಪ್ಪನವರಿಗೆ ಇಂತಹ ಮಾತು ಶೋಭೆ ತರುವುದಿಲ್ಲ ಮತ್ತು ಇದು ಸಂವಿಧಾನಬದ್ಧ ಚುನಾಯಿತ ಪ್ರತಿನಿಧಿಯ ಲಕ್ಷಣವಲ್ಲ.

ರಾಜಕಾರಣದಲ್ಲಿ ಆರೋಪ– ಪ್ರತ್ಯಾರೋಪಗಳು, ಟೀಕೆಟಿಪ್ಪಣಿಗಳು ಸಹಜ. ರಚನಾತ್ಮಕ ಟೀಕೆ ಪ್ರಜಾ
ಪ್ರಭುತ್ವ ವ್ಯವಸ್ಥೆಯ ಸೌಂದರ್ಯವೂ ಹೌದು. ಆದರೆ, ಸಾರ್ವಜನಿಕವಾಗಿ ಮಾತನಾಡುವಾಗ ರಾಜಕಾರಣಿಗಳು ಸಭ್ಯತೆಯ ಪರಿಧಿಯನ್ನು ದಾಟದೆ ಉತ್ತಮ ನಡವಳಿಕೆಯ ಬದ್ಧತೆಯನ್ನು ಪ್ರದರ್ಶಿಸಬೇಕು. ಮಾತ್ರವಲ್ಲದೆ, ಸಂಸದೀಯ ಭಾಷೆಯನ್ನು ಬಳಸಬೇಕು. ಸಾರ್ವಜನಿಕ ಜೀವನದಲ್ಲಿರುವಾಗ ವಿರೋಧಿಗಳನ್ನು ವೈಯಕ್ತಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಹತಾಶೆಯ ಪರಮಾವಧಿ ಹಾಗೂ ಮಾನಸಿಕ ನ್ಯೂನತೆಯೇ ಆಗಿದೆ. ಸಚಿವ ಈಶ್ವರಪ್ಪ ಅವರ ಈ ನಡವಳಿಕೆ ಇದೇ ಮೊದಲಲ್ಲ. ಈ ಹಿಂದೆಯೂ ಅವರು ಬೇಕಾಬಿಟ್ಟಿ ನಾಲಿಗೆ ಹರಿಬಿಟ್ಟ ಅನೇಕ ಉದಾಹರಣೆಗಳು ಇವೆ. ಅವರ ಇಂತಹ ಕೆಟ್ಟ ಪರಿಪಾಟಕ್ಕೆ ಅವರ ಪಕ್ಷವು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

ಅಜಯ್ ರಾಜ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT