ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮೂಲಿಕೆಗೆ ಮೂದಲಿಕೆ ಸಲ್ಲದು

Last Updated 21 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಗಿಡಮೂಲಿಕೆ ವೈದ್ಯಕೀಯವು ನಾಡಿನ ಬಹುದೊಡ್ಡ ಪಾರಂಪರಿಕ ಆಸ್ತಿ. ಆ ವೈದ್ಯ ವಿಧಾನ ಕುರಿತ ವಿಭಿನ್ನ ಅಭಿಪ್ರಾಯಗಳು ಜಾಲತಾಣಗಳಲ್ಲಿ ಹರಿದಾಡುತ್ತಿರುವಂತೆಯೇ ಪತ್ರಿಕೆಯಲ್ಲಿ ಪ್ರಕಟವಾದ ಎರಡು ಪತ್ರಗಳು (ವಾ.ವಾ., ಸೆ. 17, 18) ಗಮನ ಸೆಳೆದವು. ಅನಧಿಕೃತ ಔಷಧಗಳನ್ನು ನಿಷೇಧಿಸಲು ಕರೆ ನೀಡಿರುವ ಪತ್ರದಲ್ಲಿ, ಯಾವ ತರಬೇತಿ ಮತ್ತು ಪರವಾನಗಿಯೂ ಇಲ್ಲದ ಪದ್ಧತಿ ಎಂದು ಕರೆಯಲಾಗಿದೆ. ಆದರೆ ನಾನು ಕಂಡಂತೆ ಮೂಲಿಕೆಗಳನ್ನು ಒಳಗೊಂಡ ಕೆಲವು ಆರೈಕೆಗಳು ಫಲ ನೀಡಿವೆ. ಹಾವು ಕಡಿತಕ್ಕೆ ಔಷಧ ಕೊಡುವ ಅನೇಕ ನಾಟಿ ವೈದ್ಯರು ಮಲೆನಾಡಿನಲ್ಲಿ ಇದ್ದಾರೆ. ಮುರಿದ ಮೂಳೆಗಳನ್ನು ಸೇರಿಸಿ ಗಿಡಮೂಲಿಕೆಗಳ ಮೂಲಕ ಮೂಲ ಚಲನವಲನಕ್ಕೆ ದೇಹ ಸ್ಪಂದಿಸುವಂತೆ ಮಾಡುವ ಗಿಡಮೂಲಿಕೆಗಳನ್ನು ಕೊಡಲಾಗುತ್ತಿದೆ.

ಯಾವುದೇ ಕಾಯಿಲೆಯು ಪ್ರಾರಂಭಿಕ ಹಂತದಲ್ಲಿ ಪತ್ತೆಯಾದರೆ ಚಿಕಿತ್ಸೆ ಸುಲಭ. ಗಿಡಮೂಲಿಕೆಯು ಹಣ ಮಾಡುವ ಹಾದಿ ಎಂಬುದು ಒಪ್ಪಿತ ಮಾತಲ್ಲ. ನಾಡಿ ಪರೀಕ್ಷೆ ಮಾಡಿ ಔಷಧ ನೀಡುವ ನಮ್ಮ ನಾಟಿ ವೈದ್ಯ ಪದ್ಧತಿ ಅನುಭವದಿಂದ ಬಂದದ್ದು. ತರಬೇತಿ ಎಂಬುದು ಇಲ್ಲ. ಪ್ರತೀ ಔಷಧಕ್ಕೂ ಗಿಡ, ಸೊಪ್ಪು ಮತ್ತು ಬೇರುಗಳು ಮೂಲ. ಅಡ್ಡಪರಿಣಾಮ ರಹಿತ ಮೂಲಿಕಾ ವೈದ್ಯಕ್ಕೆ ನಿಷೇಧ ಹೇರುವುದು ಬೇಡ. ಬದಲಾಗಿ, ನಾಟಿ ವೈದ್ಯರಿಗೆ ಸೂಕ್ತ ತರಬೇತಿ ನೀಡುವ ಮತ್ತು ಆ ಮೂಲಿಕೆ ವೈದ್ಯಕೀಯದ ಕುರಿತ ಸಂಶೋಧನೆಗಳು ನಡೆಯುವುದು ಸೂಕ್ತ.

–ಕಾಂತೇಶ ಕದರಮಂಡಲಗಿ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT