ಹಳ್ಳಿಗಳು ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸಂಚಾರ ಅವ್ಯವಸ್ಥೆಯಿಂದ ಕೆಲವೆಡೆ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಇರುವ ನಿಯಮಗಳ ಕನಿಷ್ಠ ಪಾಲನೆಯೂ ಆಗುತ್ತಿಲ್ಲ. ಏಕೆಂದರೆ, ಗ್ರಾಮಗಳಲ್ಲಿ ಹೆಚ್ಚಾಗಿ ಸಂಚರಿಸುವ ತ್ರಿಚಕ್ರ ವಾಹನ ಟಾಂಟಾಂ ಮತ್ತು ಆಟೊಗಳಲ್ಲಿ ಜನರನ್ನು ಮಂದೆಯಂತೆ ತುಂಬಿಸಿ ಕರೆದೊಯ್ಯಲಾಗುತ್ತಿದೆ.

ಹತ್ತು– ಹದಿನೈದು ಜನ ಚಿಕ್ಕ ವಾಹನವೊಂದರಲ್ಲಿ ಪ್ರಯಾಣಿಸಿದರೆ ಅಂತರ ಕಾಯ್ದುಕೊಳ್ಳುವುದಾದರೂ ಹೇಗೆ? ಅಲ್ಲದೆ ಬಸ್ ಪ್ರಯಾಣಕ್ಕಿಂತ ದುಪ್ಪಟ್ಟು ಪ್ರಯಾಣ ದರ ವಿಧಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಜನ ಒಂದೇ ಬಾರಿಗೆ ಕೊರೊನಾದಂಥ ಆರೋಗ್ಯ ಸಮಸ್ಯೆಗೆ ತಮ್ಮನ್ನುಒಡ್ಡಿಕೊಳ್ಳಬೇಕಾದ ಮತ್ತು ಆರ್ಥಿಕ ಶೋಷಣೆಯನ್ನು ಎದುರಿಸಬೇಕಾದ ಸ್ಥಿತಿ ಒದಗಿದೆ.

ಹೀಗಾಗಿ, ತಾಲ್ಲೂಕು ಮಟ್ಟದಲ್ಲಿ ವ್ಯಾಪಕವಾಗಿರುವ ಕೊರೊನಾ ಸೋಂಕು, ಗ್ರಾಮಗಳಿಗೆ ಕಾಲಿರಿಸುವ ಸರಪಳಿಯ ಕೊಂಡಿಗಳನ್ನು ತುಂಡರಿಸಬೇಕಿದೆ. ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಟಾಂಟಾಂಗಳ ಓಡಾಟವನ್ನು ನಿಯಂತ್ರಿಸಬೇಕು ಮತ್ತು ಕೊರೊನಾ ತಡೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ನಿರ್ದೇಶಿಸಬೇಕು.

ಲೋಪವಾದಲ್ಲಿ ತಕ್ಷಣವೇ ಕ್ರಮ ಜರುಗಿಸಬೇಕು. ಇದಕ್ಕೆ ಪರ್ಯಾಯವಾದ ಸಾರಿಗೆ ಸೇವೆಯಾಗಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‍ಗಳ ಓಡಾಟವನ್ನು ಹೆಚ್ಚಿಸಬೇಕು. ಜನಸಾಮಾನ್ಯರಲ್ಲಿ ಕೊರೊನಾ ಬಗೆಗೆ ಇರುವ ಅನಗತ್ಯ ಭಯ ನಿವಾರಣೆ ಹಾಗೂ ಸೋಂಕು ನಿಯಂತ್ರಣದ ಕುರಿತು ಅವರಲ್ಲಿ ಇನ್ನಷ್ಟು ಅರಿವು ಮೂಡಿಸಬೇಕಾದ ಕೆಲಸ ತುರ್ತಾಗಿ ಆಗಬೇಕಾಗಿದೆ.
-ಮಹೇಶ್,ಏಚಗುಂಡ್ಲ, ನಂಜನಗೂಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.