ಗುರುವಾರ , ಸೆಪ್ಟೆಂಬರ್ 23, 2021
25 °C

ಶೌಚಾಲಯ ಬಳಕೆ ದರದಲ್ಲೂ ಲಿಂಗಭೇದ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಬಹುತೇಕ ಖಾಸಗಿ, ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಇರುವ ಶೌಚಾಲಯಗಳು ಅಸಮರ್ಪಕ ನಿರ್ವಹಣೆಯಿಂದ ಗಬ್ಬು ನಾರುತ್ತಿರುತ್ತವೆ. ಆದರೂ ಅವುಗಳ ಬಳಕೆಗಾಗಿ ಅಲ್ಲಿನವರು ಸಂಗ್ರಹಿಸುವ ಹಣ ಮಾತ್ರ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲಿನ ಫಲಕಗಳಲ್ಲಿ ‘ಮೂತ್ರ ವಿಸರ್ಜನೆ ಉಚಿತ’ ಎಂದು ನಮೂದಿಸಿದ್ದರೂ  ಪುರುಷರಿಂದ ₹ 3, ಮಹಿಳೆಯರಿಂದ ₹ 5 ಪಡೆಯಲಾಗುತ್ತದೆ. ಪ್ರಶ್ನಿಸಿದರೆ ‘ಏನ್ರೀ ಅಷ್ಟು ಕೊಡಕ್ಕೆ ಆಗದೇ ಇದ್ದವರು ಯಾಕೆ ಹೋಗ್ಬೇಕಾಗಿತ್ತು’ ಎಂಬ ಉತ್ತರ ಸಿಗುತ್ತದೆ.

ಪುರುಷರಿಗಿಂತ ಮಹಿಳೆಯರಿಂದ ಹೆಚ್ಚು ಹಣ ತೆಗೆದುಕೊಳ್ಳುವುದೇಕೆ? ಬಹುಶಃ ಪುರುಷರಾದರೆ ರಸ್ತೆಯ ಯಾವುದೋ ಮೂಲೆ, ಸಂದುಗೊಂದಿನಲ್ಲಿ ಮೂತ್ರ ವಿಸರ್ಜಿಸಬಹುದು, ಮಹಿಳೆಯರಿಂದ ಅದು ಸಾಧ್ಯವಾಗದು ಎಂಬ ಗ್ರಹಿಕೆಯೂ ಇರಬಹುದು. ಶೌಚಾಲಯದಲ್ಲಿ ಶುಚಿತ್ವ ಕಾಯ್ದುಕೊಳ್ಳಲು, ಬಳಕೆ ದರ ಕಡಿತಗೊಳಿಸಲು ಹಾಗೂ ಆ ದರದಲ್ಲಿನ ಭೇದ ಸರಿಪಡಿಸಲು ಸಂಬಂಧಪಟ್ಟವರು ಗಮನಹರಿಸಬೇಕು.
-ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.