ಶುಕ್ರವಾರ, ಏಪ್ರಿಲ್ 10, 2020
19 °C

ಲೈಕ್‌, ಕಮೆಂಟ್‌ನಲ್ಲಿ ಕಾಲಹರಣ ಸರಿಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ಯುವ ಸಮುದಾಯ ಇತ್ತೀಚೆಗೆ ಫೇಸ್‌ಬುಕ್, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಲೈಕ್, ಕಮೆಂಟ್ ಹಾಕುತ್ತಾ ವಿಡಿಯೊ ಮಾಡಿ ಹರಿಬಿಡುತ್ತಾ ತಮ್ಮ ಅಮೂಲ್ಯ ಸಮಯವನ್ನು ಹರಣ ಮಾಡುತ್ತಿದೆ. ಹಾಕಿರುವ ಪೋಸ್ಟ್‌ಗಳಿಗೆ ಕಡಿಮೆ ಲೈಕ್ಸ್, ಕಮೆಂಟ್‌ಗಳು ಬಂದರೆ ಅವರು ಮಾನಸಿಕ ಹಿಂಸೆ ಅನುಭವಿಸುತ್ತಿರುತ್ತಾರೆ. ಈ ವಿಚಾರದಲ್ಲಿ ಕೆಲವು ಸಾವು ನೋವುಗಳು ಕೂಡ ಸಂಭವಿಸಿರುವ ನಿದರ್ಶನಗಳಿವೆ. ಆದರೂ ಇದಕ್ಕೆ ಯಾವುದೇ ಕಡಿವಾಣ ಇಲ್ಲದಂತಾಗಿದೆ. ಸಾಮಾಜಿಕ ಜಾಲತಾಣಗಳ ಮಹತ್ವ ಅರಿಯದ ಯುವ ಸಮುದಾಯವು ಕೇವಲ ಲೈಕ್, ಕಮೆಂಟ್‌ಗಳಲ್ಲಿ ದಿನವೂ ಗಂಟಾನುಗಟ್ಟಲೆ ಕಾಲ ಕಳೆಯುತ್ತಿರುವುದು, ಪುಸ್ತಕ, ಪತ್ರಿಕೆಗಳ ಓದಿನಿಂದ ದೂರ ಉಳಿಯುತ್ತಿರುವುದು ಆತಂಕಕಾರಿ ವಿಷಯ.

ಈ ಗೀಳು ನಿವಾರಿಸುವ ಮಾರ್ಗೋಪಾಯಗಳ ಬಗ್ಗೆ ಯೋಚಿಸಬೇಕಾಗಿದೆ. ಇದು, ಸರ್ಕಾರದಿಂದ ಮಾತ್ರವೇ ಆಗುವ ಕೆಲಸ ಅಲ್ಲ. ಪೋಷಕರು, ಶಿಕ್ಷಣ ತಜ್ಞರು ಎಲ್ಲರೂ ಕುಳಿತು ಉಪಾಯ ಶೋಧಿಸಬೇಕಾಗಿದೆ.

– ಎಸ್.ನಾಗರಾಜ, ನಾಗೂರ, ಬಾಗಲಕೋಟೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು