ಶುಕ್ರವಾರ, ಮೇ 14, 2021
30 °C

ಬೇಜವಾಬ್ದಾರಿತನದ ನಡೆ ಸಲ್ಲ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಬೇಜವಾಬ್ದಾರಿತನದ ನಡೆ ಸಲ್ಲ

ವಿಮಾನ ಪ್ರಯಾಣಿಕರಿಗೆ ವೈದ್ಯಕೀಯ ಪ್ರಮಾಣಪತ್ರ ಪರಿಶೀಲನೆ ಕಡ್ಡಾಯಗೊಳಿಸಬೇಕು ಎಂಬುದನ್ನು ಜಯಮ್ಮ ಗೋಪಾಲಕೃಷ್ಣ ಅವರು ಅರ್ಥಪೂರ್ಣವಾಗಿ ಪ್ರತಿಪಾದಿಸಿದ್ದಾರೆ (ವಾ.ವಾ., ಏ. 10). ನಿಜ, ಕೊರೊನಾದ ಮೊದಲ ಅಲೆಯ ಸಂದರ್ಭದಲ್ಲಿ ವಿದೇಶಗಳಿಂದ ಯಾವುದೇ ಎಗ್ಗಿಲ್ಲದೆ ವಿಮಾನಗಳ ಮೂಲಕ ಲಕ್ಷಾಂತರ ಮಂದಿ ದೇಶವನ್ನು ಪ್ರವೇಶಿಸಿದರು. ಆ ದಿನಗಳಲ್ಲಿ ಹೀಗೆ ಬಂದವರನ್ನು ವಿಮಾನ ನಿಲ್ದಾಣಗಳಲ್ಲಿ ಯಾವುದೇ ಪರೀಕ್ಷೆಗೂ ಒಳಪಡಿಸದೆ, ಕ್ವಾರಂಟೈನ್‌ಗೂ ಒಳಪಡಿಸದೆ ಸೀದಾಸಾದಾ ದೇಶದೊಳಕ್ಕೆ ಬಿಟ್ಟುಕೊಂಡ ಬೇಜವಾಬ್ದಾರಿತನದ ನಡೆಯಿಂದಾಗಿ ದೇಶದಾದ್ಯಂತ ಕೊರೊನಾ ಹರಡಿ ಜನರನ್ನು ಇನ್ನಿಲ್ಲದಂತೆ ಕಾಡುವಂತಾಯಿತು. ಕೊರೊನಾದ ಎರಡನೇ ಅಲೆ ಶುರುವಾಗಿರುವ ಈ ಸಂದರ್ಭದಲ್ಲಾದರೂ ಸರ್ಕಾರಗಳು ಎಚ್ಚರಿಕೆಯಿಂದ ವರ್ತಿಸಬೇಕು.

- ರಾಜೇಂದ್ರ ಅಪುರಾ, ಅಗತಗೌಡನಹಳ್ಳಿ, ಗುಂಡ್ಲುಪೇಟೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.