ಶುಕ್ರವಾರ, ಮೇ 29, 2020
27 °C

ಖಾಸಗಿ ಆಸ್ಪತ್ರೆಗಳೂ ಒಳಗೊಳ್ಳಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ಸೋಂಕುಪೀಡಿತರ ಆರೈಕೆಯಲ್ಲಿ ಖಾಸಗಿ ಆಸ್ಪತ್ರೆಗಳೂ ಸರ್ಕಾರದೊಂದಿಗೆ ಕೈಜೋಡಿಸಬೇಕಾಗಿದೆ. ಆದರೆ  ಕೆಲವು ಖಾಸಗಿ ಆಸ್ಪತ್ರೆಗಳು ಲಾಕ್‍ಡೌನ್ ನೆಪದಲ್ಲಿ ಒಪಿಡಿ ಹಾಗೂ ಇತರ ಸೇವೆಗಳನ್ನು ಬಂದ್‌ ಮಾಡಿವೆ. ಹಾಗಿದ್ದರೆ, ಹಣ ಕೀಳುವ ಸಂದರ್ಭಗಳಲ್ಲಷ್ಟೇ ಈ ಆಸ್ಪತ್ರೆಗಳು ರೋಗಿಗಳಿಗೆ ಸೇವೆ ನೀಡುವುದೇ? ಸರ್ಕಾರಿ ಆಸ್ಪತ್ರೆಗಳಲ್ಲಿರುವ, ಕೊರೊನಾ ವೈರಸ್‍ಗೆ ಸಂಬಂಧಪಡದ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದರೆ, ಕೊರೊನಾ ಸೋಂಕುಪೀಡಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶುಶ್ರೂಷೆ ಸುಲಭವಾಗುತ್ತದೆ. ಅಲ್ಲದೆ ವೈರಾಣು ಹರಡುವುದನ್ನೂ ಮಿತಿಗೊಳಿಸಬಹುದು. ಖಾಸಗಿ ಆಸ್ಪತ್ರೆಗಳ ವೈದ್ಯರನ್ನೂ ಈ ಸಾಮಾಜಿಕ ಸೇವೆಯ ಪರಿಧಿಗೆ ತರಬಹುದು. ಖಾಸಗಿ ಆಸ್ಪತ್ರೆಗಳು ಒಪ್ಪದಿದ್ದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. 

 ‌ಗಂಗಾಧರ ಅಂಕೋಲೆಕರ, ಧಾರವಾಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.