ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಲ್ವೊ ಬಸ್‌ ಖರೀದಿ: ಪೂರ್ವಭಾವಿ ಸಮೀಕ್ಷೆ ನಡೆಯಲಿಲ್ಲವೇಕೆ?

Last Updated 21 ಜೂನ್ 2019, 19:46 IST
ಅಕ್ಷರ ಗಾತ್ರ

ಬಿಎಂಟಿಸಿಯ ನಷ್ಟಕ್ಕೆ ಕಾರಣವಾಗಿರುವ 800 ಹವಾನಿಯಂತ್ರಿತ ವೋಲ್ವೊ ಬಸ್‌ಗಳನ್ನು ಕೆಎಸ್ಆರ್‌ಟಿಸಿಗೆ ಹಸ್ತಾಂತರಿಸಿ, ಇತರ ನಗರಗಳಿಗೂ ಈ ಸೇವೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ (ಪ್ರ.ವಾ., ಜೂನ್‌ 21). ಈ ಬಸ್‌ಗಳನ್ನು ಇಷ್ಟೊಂದು ಪ್ರಮಾಣದಲ್ಲಿ ಒಟ್ಟಿಗೇ ಖರೀದಿಸುವ ಮುನ್ನ, ಅವುಗಳ ಬೇಡಿಕೆ ಮತ್ತು ಅವಶ್ಯಕತೆಯ ಕುರಿತು ಪೂರ್ವಭಾವಿಯಾಗಿ ಸಮೀಕ್ಷೆ ನಡೆಸಬೇಕಿತ್ತು. ನಂತರ ಪ್ರಾಯೋಗಿಕವಾಗಿ ಒಂದೆರಡು ಆಯ್ದ ಮಾರ್ಗಗಳಲ್ಲಿ ಸಂಚರಿಸುವ ವ್ಯವಸ್ಥೆ ಮಾಡಿ, ಸಾಧಕ-ಬಾಧಕಗಳ ಕೂಲಂಕಷ ಅಧ್ಯಯನ ನಡೆಸಿದ್ದರೆ, ನಷ್ಟದ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲವೇನೋ.

ಈ ಬಸ್‌ಗಳು ಕಾರ್ಯಾಚರಣೆಗೆ ಇಳಿದಾಗಿನಿಂದಲೇ ನಷ್ಟ ಅನುಭವಿಸುತ್ತಿದ್ದರೆ, ಇಷ್ಟು ದಿನ ಮುಂದುವರಿಸಿ ಕೊಂಡು ಬಂದುದರ ಔಚಿತ್ಯವೇನು? ಬಿಎಂಟಿಸಿಯಲ್ಲಿ ನಷ್ಟ ಅನುಭವಿಸಿದ ಈ ಬಸ್‌ಗಳು ಕೆಎಸ್ಆರ್‌ಟಿಸಿಯಲ್ಲಿ ಲಾಭ ಗಳಿಸುತ್ತವೆ ಎಂಬುದಕ್ಕೆ ಖಾತರಿಯೇನು?ಬಿಎಂಟಿಸಿ ವಿಚಾರದಲ್ಲಿ ಹೇಳುವುದಾದರೆ, ಜನರು ಹೆಚ್ಚು ಕಡಿಮೆ ಅಷ್ಟೇ ದುಡ್ಡಿಗೆ ಕ್ಯಾಬ್‌ನಲ್ಲಿಯೋ ಅಥವಾ ಸ್ವಂತವಾಹನದಲ್ಲಿಯೋ ಪ್ರಯಾಣಿಸಲು ಇಚ್ಛಿಸುತ್ತಾರೆ. ಈ ಕನಿಷ್ಠ ಜ್ಞಾನ ನಮ್ಮನ್ನು ಆಳುವವರಿಗೆಇದ್ದಿದ್ದರೆ ತೆರಿಗೆದಾರರ ಹಣ ಉಳಿಯುತ್ತಿತ್ತು.

–ಪುಟ್ಟೇಗೌಡ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT