ಬುಧವಾರ, ಅಕ್ಟೋಬರ್ 28, 2020
23 °C

ವಾಚಕರ ವಾಣಿ: ವೃತ್ತಿಗೆ ಅಗೌರವ ತಂದ ಅಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಒಬ್ಬರು ದಿಢೀರ್ ಶ್ರೀಮಂತರಾಗಲು, ಅಡಿಕೆ ಮಾರಾಟದ ಹಣ ತೆಗೆದುಕೊಂಡು ಹೊರಟಿದ್ದ ವ್ಯಕ್ತಿಯನ್ನು ಅಪಹರಿಸಿ, ಅವರಿಂದ ₹ 26 ಲಕ್ಷ ಸುಲಿಗೆ ಮಾಡಿ ತಮ್ಮ ವೃತ್ತಿಗೆ ಅಗೌರವ ತಂದಿರುವುದು (ಪ್ರ.ವಾ., ಆ. 25) ನಾಚಿಕೆಗೇಡು.

ವೃತ್ತಿ ಬದುಕಿನಲ್ಲಿ ಪ್ರಾಮಾಣಿಕತೆಯಿಂದ ಅವರು ಕೀರ್ತಿ, ಉನ್ನತ ಹುದ್ದೆ ಎಲ್ಲವನ್ನೂ ಗಳಿಸಬಹುದಿತ್ತು. ಹೀಗಿರುವಾಗ, ಪೊಲೀಸ್‌ ಅಧಿಕಾರಿಯಂತಹ ಪ್ರಭಾವಿ ಹುದ್ದೆಯಲ್ಲಿದ್ದೂ ಸುಲಿಗೆ ಮಾಡುವ ಮನಃಸ್ಥಿತಿ ಇವರಿಗೆ ಹೇಗೆ ಬಂತು? ರಕ್ಷಕರೇ ಭಕ್ಷಕರಾದರೆ ಇನ್ನು ಜನಸಾಮಾನ್ಯರ ಪಾಡೇನು?

-ಸಾ.ಮ.ಶಿವಮಲ್ಲಯ್ಯ, ಸಾಸಲಾಪುರ, ಕನಕಪುರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು