ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಒಪ್ಪಿತ ಮೌಲ್ಯವಾದಾಗ...

Last Updated 10 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಭ್ರಷ್ಟಾಚಾರದ ಬಗ್ಗೆ ಸರ್ಫ್ರಾಜ್ ಚಂದ್ರಗುತ್ತಿ ಅವರ ಲೇಖನ (ಸಂಗತ, ಆ. 7) ಬೆಳಕು ಚೆಲ್ಲಿದೆ. ಹಿಂದೆ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿದ್ದ ಕೆ.ಪಿ.ಹನುಮಂತರಾಯಪ್ಪ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ‘ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಇಲ್ಲದಿದ್ದರೆ ಶೇಕಡ 80ರಷ್ಟು ಸಮಸ್ಯೆಗಳು ಕಡಿಮೆಯಾಗುತ್ತವೆ.

ಭ್ರಷ್ಟಾಚಾರ ಎಂಬುದು ಲಂಚ ತೆಗೆದುಕೊಳ್ಳುವ ಮತ್ತು ಕೊಡುವ ಎರಡನ್ನೂ ಒಳಗೊಂಡಿದೆ. ಇವುಗಳಲ್ಲಿ ಯಾವುದಾದರೂ ಒಂದು ಅನೈತಿಕ ಎಂದು ಭಾವಿಸಿ ಅದನ್ನು ಮಾಡದಿದ್ದರೆ ಭ್ರಷ್ಟಾಚಾರದ ಪ್ರಮಾಣ ಕಡಿಮೆಯಾಗುತ್ತದೆ’ ಎಂದಿದ್ದರು. ಆದರೆ ಎರಡು ಕಡೆಯಿಂದಲೂ ಲಂಚ ಒಪ್ಪಿತ ಮೌಲ್ಯವಾದಾಗ ಭ್ರಷ್ಟಾಚಾರವೆಂಬ ವೈರಸ್‌ಗೆ ಮದ್ದನ್ನು ಎಲ್ಲಿಂದ ತರುವುದು? ಹೀಗಾಗಿಯೇ, ಲೇಖನದಲ್ಲಿ ಹೇಳಿರುವಂತೆ, ಭ್ರಷ್ಟಾಚಾರ ನಿರ್ಮೂಲನ ಸಾಮರ್ಥ್ಯದ ಬಗ್ಗೆ ಲೋಕಲ್ ಸರ್ಕಲ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಜನ ನಿರಾಶಾವಾದಿಗಳಾಗಿ ಪ್ರತಿಕ್ರಿಯಿಸಿರಬಹುದು.

ಶಿವಕುಮಾರ್ ಎಸ್., ಊರುಕೆರೆ,ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT