ಪ್ರೌಢಶಾಲಾ ಶಿಕ್ಷಕರ ಕಾರ್ಯಕ್ಷಮತೆ ಪರೀಕ್ಷಿಸುವ ಸಲುವಾಗಿ ನಡೆಸಲು ಉದ್ದೇಶಿಸಿದ್ದ ಪರೀಕ್ಷೆಯನ್ನು ರದ್ದು ಮಾಡಲು ಹಾಸನ ಜಿಲ್ಲಾಧಿಕಾರಿಗೆ ಸೂಚಿಸುವುದಾಗಿ ಶಿಕ್ಷಣ ಸಚಿವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಹೊಸ ಪಠ್ಯಕ್ರಮಗಳಿಗೆ ಶಿಕ್ಷಕರು ಎಷ್ಟರಮಟ್ಟಿಗೆ ಹೊಂದಿಕೊಂಡಿದ್ದಾರೆ ಎಂದು ತಿಳಿಯುವ ಕ್ರಮಕ್ಕೆ ಇದು ಒಂದು ರೀತಿಯ ಹಿನ್ನಡೆಯಾಗಿದೆ. ಶಿಕ್ಷಕರು ‘ನಿರಂತರ ವಿದ್ಯಾರ್ಥಿ’ಗಳು. ಅವರು ಸದಾ ಕಲಿಯುತ್ತಿರಬೇಕಾದವರು.
ಹೊಸ ಹೊಸ ಬೋಧನಾ ವಿಧಾನಗಳು ಮತ್ತು ಕಲಿಕಾ ವಿಷಯಗಳನ್ನು ರೂಢಿಸಿಕೊಳ್ಳಬೇಕಾದವರು. ಇಂಥಶಿಕ್ಷಕರ ಕಾರ್ಯಕ್ಷಮತೆ ಪರೀಕ್ಷಿಸಲು ಪರೀಕ್ಷೆಯನ್ನು ನಡೆಸಿದರೆ ತಪ್ಪೇನು?

ಶಿಕ್ಷಕರ ಮೌಲ್ಯಮಾಪನ ಮಾಡಿ ಅವರನ್ನು ಕಲಿಕಾ ವಿಷಯಗಳ ಕಡೆಗೆ ಕರೆದುಕೊಂಡು ಹೋಗುತ್ತಿದ್ದ ಹಾಸನ ಜಿಲ್ಲಾಧಿಕಾರಿಯ ಪ್ರಯತ್ನಕ್ಕೆ ಸರ್ಕಾರ ಬ್ರೇಕ್ ಹಾಕಿರುವುದು ವಿಷಾದನೀಯ.

ಜಿಲ್ಲಾಧಿಕಾರಿ ಉದ್ದೇಶಿಸಿದಂತೆ, ಜುಲೈ 28 ರಂದು ಪರೀಕ್ಷೆ ನಡೆಸಲು ಅನುವು ಮಾಡಿಕೊಡುವುದರ ಮೂಲಕ ಸರ್ಕಾರವು ಹೊಸತನಕ್ಕೆ ನಾಂದಿ ಹಾಡಬೇಕು.

ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.