ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಬಸ್ ಕೊರತೆ ಏಕೆ?

Last Updated 30 ಅಕ್ಟೋಬರ್ 2022, 20:00 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ‌ಬಸ್ಸುಗಳ ಕೊರತೆ ಎದ್ದು ಕಾಣುತ್ತಿದೆ. ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಬಸ್ಸುಗಳಂತೂ ತುಂಬಿ ತುಳುಕುತ್ತಿವೆ. ಹಣ ತೆತ್ತು ನೂರಾರು ಕಿಲೊಮೀಟರ್ ನಿಂತುಕೊಂಡು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಸರ್ಕಾರಿ ಬಸ್ಸುಗಳ ಕೊರತೆಯೋ ಅಥವಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆಯೋ ತಿಳಿಯದು. ನಿವೃತ್ತರಾದ ಚಾಲಕರು ಹಾಗೂ ನಿರ್ವಾಹಕರ ಹುದ್ದೆಯನ್ನು ಭರ್ತಿ ಮಾಡದೇ ಅಥವಾ ಬಸ್ ಕೊರತೆಯ ಕೃತಕ ಅಭಾವವನ್ನು ಸೃಷ್ಟಿಸಿಯೋ ಆದಾಯ ದುಪ್ಪಟ್ಟು ಮಾಡಿಕೊಳ್ಳುವ ಹುನ್ನಾರ ಸಾರಿಗೆ ನಿಗಮಗಳದ್ದಾಗಿರಬೇಕು ಎಂಬ ಅನುಮಾನ ಕಾಡುತ್ತಿದೆ.

-ವಿಜಯ್ ರಾಂಪುರ, ಚನ್ನಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT