ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಹಿತಾಸಕ್ತಿಗೆ ಇರಲಿ ಮಾನ್ಯತೆ

Last Updated 1 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಮಥುರಾದಲ್ಲಿ ಮದ್ಯ, ಮಾಂಸ ಮಾರಾಟ ನಿಷೇಧಿಸಲು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುಂದಾಗಿದ್ದಾರೆ (ಪ್ರ.ವಾ., ಸೆ. 1). ಮುಖ್ಯಮಂತ್ರಿಯಾದವರು ಸಾರ್ವಜನಿಕರ ಹಿತಾಸಕ್ತಿಯಂತೆ ನಡೆಯಬೇಕೇ ವಿನಾ ತಮ್ಮ ಇಷ್ಟದಂತೆ ಅಲ್ಲ. ಧಾರ್ಮಿಕ ಸ್ಥಳಗಳಲ್ಲಿ ಮಾಂಸಾಹಾರ ಅಥವಾ ಮದ್ಯ ವರ್ಜ್ಯ ಎಂದರೆ, ಮುಂದೆ ಅಲ್ಲಿಗೆ ಭೇಟಿ ನೀಡುವವರ ಸಂಖ್ಯೆಯೇ ಕಡಿಮೆಯಾಗಬಹುದು.

ಅದಲ್ಲದೆ ರಾಜ್ಯದ ಅಯೋಧ್ಯೆ, ಚಿತ್ರಕೂಟ ಮುಂತಾದ ಧಾರ್ಮಿಕ ನಗರಗಳಲ್ಲೂ ಇಂತಹ ನಿಷೇಧ ಮುಂದುವರಿಸಲು ಸರ್ಕಾರ ಚಿಂತನೆ ನಡೆಸಿರುವುದನ್ನು ನೋಡಿದರೆ, ಮೊಹಮ್ಮದ್‌ ಬಿನ್‌ ತುಘಲಕನ ಆಡಳಿತ ನೆನಪಿಗೆ ಬರುತ್ತದೆ. ಸನ್ಯಾಸಿಯಾಗಿರುವ ಆದಿತ್ಯನಾಥ ಅವರು ಜನರೆಲ್ಲಾ ಸನ್ಯಾಸಿಯಾಗಬೇಕೆಂದು ಬಯಸಿದಂತಿದೆ. ಯಾವುದೇ ಧಾರ್ಮಿಕ ಸ್ಥಳಗಳಲ್ಲೂ ಇಲ್ಲದ ಹೊಸ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟದ ಜೊತೆಗೆ ಜನರ ಇಷ್ಟಕ್ಕೆ ವಿರುದ್ಧವಾಗಿ ನಡೆದಂತೆಯೂ ಆಗುತ್ತದೆ. ಇಂತಹ ನಡೆ ಸರಿಯಲ್ಲ.

-ಬಾಲಕೃಷ್ಣ ಎಂ.ಆರ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT