ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸ್‌ಲೈಕ್‌ ಅಳಿಸಬಹುದು; ಜನಾಭಿಪ್ರಾಯ...?

Last Updated 4 ಸೆಪ್ಟೆಂಬರ್ 2020, 20:00 IST
ಅಕ್ಷರ ಗಾತ್ರ

ಬಿಜೆಪಿಯ ಅಧಿಕೃತ ಯುಟ್ಯೂಬ್‌ ಚಾನೆಲ್‌ನಲ್ಲಿ ಪೋಸ್ಟ್‌ ಮಾಡಲಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ‘ಮನದ ಮಾತು’ ಬಾನುಲಿ ಕಾರ್ಯಕ್ರಮದ ಆ. 30ರ ಆವೃತ್ತಿಯ ವಿಡಿಯೊವನ್ನು ಸುಮಾರು 10 ಲಕ್ಷ ಜನ ಡಿಸ್‌ಲೈಕ್ ಮಾಡಿದ್ದು, ಇವುಗಳಲ್ಲಿ ಕೆಲವು ಸಂದೇಶಗಳನ್ನು ಅಳಿಸಿಹಾಕಿರುವ ಆರೋಪ ಕೇಳಿಬಂದಿದೆ (ಪ್ರ.ವಾ., ಸೆ. 2). ಈ ವಿಡಿಯೊವನ್ನು ಜನ ಇಷ್ಟಪಡದೇ ಇದ್ದುದಕ್ಕೆ ಕಾರಣಗಳನ್ನು ಹುಡುಕಿ, ಚಿಕಿತ್ಸಕ ಮನೋಭಾವದಿಂದ ಅವಕ್ಕೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ ಅದರ ಬದಲು
ಡಿಸ್‌ಲೈಕ್‌ಗಳನ್ನೇ ಅಳಿಸಿಹಾಕುವುದರಿಂದ ಜನಮನದಲ್ಲಿ ಗಟ್ಚಿಯಾಗಿ ನೆಲೆನಿಂತ ಅಭಿಪ್ರಾಯಗಳನ್ನು ಸುಲಭವಾಗಿ ಅಳಿಸಿಹಾಕಲಾದೀತೇ?

ಜನರ ಅಭಿಪ್ರಾಯಗಳು ಮತ್ತು ಸಲಹೆ- ಸೂಚನೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ವಿಶಾಲ ಹೃದಯ ಯಾವುದೇ ಸರ್ಕಾರಕ್ಕೆ ಇರಬೇಕಾಗುತ್ತದೆ. ಇಲ್ಲದಿದ್ದರೆ ಪ್ರಜಾತಂತ್ರ ವ್ಯವಸ್ಥೆಯನ್ನು ಗೌಣಗೊಳಿಸಿದಂತೆ, ಅಣಕ ಮಾಡಿದಂತೆ ಆಗುತ್ತದೆ. ತಮ್ಮ ಹೃದಯಕ್ಕೆ ಹತ್ತಿರವಾದ ವಿಷಯಗಳ ಜೊತೆಗೆ ಪ್ರಧಾನಿ, ಜ್ವಲಂತ ಸಮಸ್ಯೆಗಳ ನಿವಾರಣೆ ಕಡೆಗೂ ಗಮನಹರಿಸಬೇಕು. ಉದ್ಯೋಗ ಸೃಷ್ಟಿ ಒಳಗೊಂಡಂತೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲಾಗದಿರುವುದಕ್ಕೆ ಕಾರಣವಾಗಿರುವ ಅಡೆತಡೆಗಳ ಬಗ್ಗೆ ಪ್ರಾಸಂಗಿಕವಾಗಿಯಾದರೂ ಪ್ರಸ್ತಾಪಿಸಿ, ಅದಕ್ಕೆ ಸಮಂಜಸವಾದ ಸಮರ್ಥನೆ ನೀಡಿದ್ದರೆ ಜನ ಮೆಚ್ಚುತ್ತಿದ್ದರು. ತಾವು ಇಚ್ಛಿಸುವ ಕಾರ್ಯಕ್ರಮಗಳನ್ನು ಜನರ ಮೇಲೆ ಹೇರದೆ, ಜನಾಭಿಪ್ರಾಯಕ್ಕೆ ಮನ್ನಣೆ ನೀಡಿದರೆ, ಸರ್ಕಾರದ ವಿಶ್ವಾಸಾರ್ಹತೆ ಹೆಚ್ಚುತ್ತದಲ್ಲವೇ?

ಪುಟ್ಟೇಗೌಡ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT