ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿಯೇ ಅಲ್ಲಲ್ಲಿ ಷೆಡ್‌ಗಳನ್ನು ಹಾಕಿಕೊಂಡು ಪಟಾಕಿಗಳನ್ನು ಮಾರುತ್ತಾರೆ. ಶಬ್ದ ಹೊಮ್ಮಿಸುವ ಆಟಂಬಾಂಬ್ ಪಟಾಕಿಗಳನ್ನು ಮನೆಗಳ ಮುಂದೆ ಹಚ್ಚುವುದರಿಂದ ದಾರಿಯಲ್ಲಿ ಓಡಾಡುವ ಪಾದಚಾರಿಗಳಿಗೆ, ಅದರಲ್ಲೂ ಅನಾರೋಗ್ಯದಿಂದ ಬಳಲುವವರು, ವೃದ್ಧರು, ಎಳೆಮಕ್ಕಳು, ಹೆಂಗಸರಿಗೆ ಶಬ್ದ ಮತ್ತು ಹೊಗೆಯಿಂದ ಆಸ್ತಮಾ, ಕೆಮ್ಮು, ಉಸಿರಾಟಕ್ಕೆ ಬಹಳ ತೊಂದರೆಯಾಗುತ್ತಿದೆ.

ಕಣ್ಣು ಕಳೆದುಕೊಂಡು, ಕೈಕಾಲುಗಳು ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ನರಳುವವರ ದೃಶ್ಯಗಳನ್ನು ಪತ್ರಿಕೆಗಳಲ್ಲಿ ನೋಡುತ್ತಿರುತ್ತೇವೆ. ಅದೂ ಅಲ್ಲದೆ ಹಳೆಯದಾದ ಕಟ್ಟಡಗಳು ಕುಸಿಯುವ ಮತ್ತು ಕಟ್ಟಡಗಳು ಬಿರುಕು ಬಿಡುವ ಸಂಭವ ಇರುತ್ತದೆ. ರಸ್ತೆಗಳಲೆಲ್ಲಾ ಪಟಾಕಿ ಸುಟ್ಟ ಪೇಪರ್ ತ್ಯಾಜ್ಯವು ರಾಶಿ ರಾಶಿಯಾಗಿ ಬಿದ್ದು ಪರಿಸರವನ್ನು ಹಾಳು ಮಾಡುತ್ತದೆ. ಆದ್ದರಿಂದ ಅತಿ ಶಬ್ದ ಬರುವ ಆಟಂಬಾಂಬ್ ಪಟಾಕಿಗಳನ್ನು ಮಾರಲು ನಿಷೇಧಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.