ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಮುಖ್ಯಮಂತ್ರಿ ಹುದ್ದೆ ನ್ಯಾಯೋಚಿತ!

Last Updated 16 ಜೂನ್ 2014, 19:30 IST
ಅಕ್ಷರ ಗಾತ್ರ

1983 ರಲ್ಲಿ ಜನತಾಪಕ್ಷ ಮತ್ತು ಕ್ರಾಂತಿರಂಗ ಒಗ್ಗೂಡಿ ‘ಜನತಾರಂಗ’ ಸರ್ಕಾರ ರಚನೆಯಾದಾಗ, ದೇವೇಗೌಡ, ಬೊಮ್ಮಾಯಿ, ಬಂಗಾರಪ್ಪ ಒತ್ತರಿಸಿ, ಧುತ್ತನೆ ದೆಹಲಿಯಿಂದ ಬಂದ ಹೆಗಡೆ ಮುಖ್ಯಮಂತ್ರಿಯಾದರು! ಆಗ ಹೆಗಡೆ ನೀಡ­ಬಂದ ಉಪಮುಖ್ಯಮಂತ್ರಿ ಸ್ಥಾನವನ್ನು ನಿರಾಕರಿಸಿ, ‘ನಾನು – ದೇವೇಗೌಡ – ಬೊಮ್ಮಾಯಿ ಸೇರಿ ಪಕ್ಷವ ಅಧಿಕಾರಕ್ಕೆ ತಂದೆವು, ಗೆದ್ದಲು ಕಟ್ಟಿದ ಹುತ್ತಕ್ಕೆ ಹಾವು ಸೇರಿದಂತೆ ನೀವು ಮುಖ್ಯಮಂತ್ರಿ­ಯಾಗಿದ್ದೀರ, ನನಗೆ ಮುಖ್ಯಮಂತ್ರಿ ಸ್ಥಾನವೇ ಬೇಕು, ಉಪಮುಖ್ಯ­ಮಂತ್ರಿಯಾಗ­ಲಾರೆ’ ಎಂದು ಸ್ವಾಭಿಮಾನಿ ಬಂಗಾರಪ್ಪ ಸಿಡಿದಿದ್ದರು!

1992 ರಲ್ಲಿ ಮೊಯಿಲಿ ಸಂಪುಟದಲ್ಲಿ ಕೃಷ್ಣ, 1996ರಲ್ಲಿ ಪಟೇಲ್‌ ಸಂಪುಟದಲ್ಲಿ ಮತ್ತು 2004 ರಲ್ಲಿ  ಧರ್ಮಸಿಂಗ್‌ ಸಂಪುಟ­ದಲ್ಲಿ ಸಿದ್ದ­ರಾ­ಮಯ್ಯ ಉಪಮುಖ್ಯ­ಮಂತ್ರಿ­ಯಾಗಿ­ದ್ದರು. ಇದೀಗ ಪರಮೇಶ್ವರ್‌ ಉಪಮುಖ್ಯ­ಮಂತ್ರಿ ಸ್ಥಾನ ಕೇಳುವುದು ಉಚಿತವಾಗಿದೆ! ಸಿದ್ದ­ರಾಮಯ್ಯ­ನವರು ನಿರಾಕರಿ­ಸುವುದು ಅನುಚಿತ­ವಾಗಿದೆ! ಅಲ್ಲದೆ ಕರ್ನಾಟಕದ ಮಟ್ಟಿಗೆ ದಲಿತ­ರೊಬ್ಬರು ಉಪಮುಖ್ಯ­ಮಂತ್ರಿಯಾದರೆ ಇತಿ­ಹಾಸ ನಿರ್ಮಾ­ಣ­ವಾಗಿ  ಮುಂದೆ ಮುಖ್ಯಮಂತ್ರಿ ಪದವಿಗೆ ಬುನಾ­ದಿಯೂ ಆಗುತ್ತದೆ! ಇದಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಒಪ್ಪಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT