ನಾವು ಕಟ್ಟಿದ ಸಾಮ್ರಾಜ್ಯದಲ್ಲಿ ಸಹಜ ನಗು ಎಲ್ಲೋ ಕಳೆದುಹೋಗಿದೆ. ಕೃತಕ ಹಲ್ಲುಗಳನ್ನಿಟ್ಟವರು ಸಹಜ ನಗು ಹೇಗೆ ನಗುವರು? ನಾವು ಕಟ್ಟಿದ ಸಾಮ್ರಾಜ್ಯದಲ್ಲಿ ಸೈನಿಕರು ಸದಾ ಸುಖಿಗಳು ಮತ್ತು ಸದಾ ಸುಖಿಗಳಾಗಿರುವುದು ಮುಖ್ಯ. ಅದಕ್ಕಾಗಿ ಜನರನ್ನು ಉಪವಾಸ ಹಾಕಲಾಗುತ್ತದೆ. ಕಾಳುಗಳನ್ನು ಹೊತ್ತೊಯ್ಯುವ ಇರುವೆಗಳಾದರೂ ಇಲ್ಲಿ ಬದುಕುತ್ತವೆ. ಆದರೆ ಮನುಷ್ಯರು ಮಾತ್ರ ಕಾಳುಗಳಿಗಾಗಿ ಕಾಯುತ್ತಾರೆ. ಐಸಿರಿಯ ಜನರಿಂದ ಲೋಕ ತುಂಬಿಹೋಗಿದೆ. ಜನರು ಪ್ರೀತಿ ಬಯಸಿದರೆ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತದೆ. ನಾವು ಕಟ್ಟಿದ ಸಾಮ್ರಾಜ್ಯದಲ್ಲಿ ಒಮ್ಮೊಮ್ಮೆ ಹೀಗಾಗುತ್ತದೆ.

ಯೋಚನೆಗಳಲ್ಲೇ ನಾವು ದಣಿದು ಹೋಗುತ್ತೇವೆ. ಕಾಡಿನಲ್ಲಿರುವ ಕ್ರೂರ ಮೃಗಗಳಂತೆ ಆಡಳಿತ ನಡೆಸುವವರು. ಆಕಾಶಕ್ಕೆ ಮುಖ ಮಾಡಿ ನವಿಲು ಕುಣಿಯುತ್ತವೆ. ರಾಷ್ಟ್ರಪಕ್ಷಿ ಅದು. ಅದರ ಕೂಗು ಮಾತ್ರ ಆಕ್ರಂದನದಂತೆ ಕೇಳಿಸುತ್ತದೆ. ಅದಕ್ಕೂ ಹಸಿವಾಗಿರಬೇಕು. ನಾವು ಕಟ್ಟಿದ ಸಾಮ್ರಾಜ್ಯದಲ್ಲಿ ಕೇವಲ ಕೆಲವರಿಗೆ ಕೆಲಸವಿದೆ. ಕೇವಲ ಕೆಲವರಿಗೆ ಸಂಪತ್ತಿದೆ. ಬೆವರಿನ ಹನಿಗಳು ಇಲ್ಲಿ ವ್ಯರ್ಥ. ವಿಧಿಯ ಮುಂದೆ ಪ್ರಯತ್ನ ನಿರರ್ಥಕ.

ನಾವು ಕಟ್ಟಿದ ಸಾಮ್ರಾಜ್ಯದಲ್ಲಿ ಹೀಗೆಲ್ಲ ಆಗುವುದು ಸಾಮಾನ್ಯ. ಕೆಲವು ಬಾರಿ ಹಾಗೊಮ್ಮೆ ಹೀಗೊಮ್ಮೆ ಅತ್ಯಾಚಾರಗಳಾಗಬಹುದು. ಭ್ರಷ್ಟಾಚಾರ ನಡೆಯಬಹುದು. ಅನಾಚಾರಕ್ಕೆ ಆಸ್ಪದವಿರಬಹುದು. ಏನೇ ಆದರೂ ಎಲ್ಲವೂ ಆಚಾರಗಳು. ಆಚಾರ ಬಿಟ್ಟು ಯಾವುದೂ ನಮ್ಮ ಸಾಮ್ರಾಜ್ಯದಲ್ಲಿ ನಡೆಯದು.

ಹೆತ್ತವರೇ ಕೆಲವು ಬಾರಿ ಮಕ್ಕಳನ್ನು ಮಾರ ಬಹುದು. ಯಾರದಾದರೂ ಬದುಕಿನ ಭರವಸೆ ಕಳೆದು ಹೋಗಬಹುದು. ಆದರೆ ನಮ್ಮ ಸಾಮ್ರಾಜ್ಯ ದಲ್ಲಿ ಆಳುವವರು ತಲೆತಲಾಂತರ ಸುಖಿಗಳಾ ಗಿಯೇ ಇರಬಹುದು.

ಗಡಿಗಳಲ್ಲಿ ಯುದ್ಧ ಅನ್ನುವ ಕ್ರೀಡೆಗೆ ಅಂತರರಾಷ್ಟ್ರೀಯ ಪ್ರೋತ್ಸಾಹವಿದೆ. ಅದನ್ನು ಟಿ.ವಿ.ಗಳಲ್ಲಿ ನೋಡಿ ಆನಂದಿಸುವುದಕ್ಕೆ ಆಸ್ಪದವಿದೆ. ಜನ ಹಾಯಾಗಿರಬಹುದು.

ಕೆಲವು ಬಾರಿ ದಂಗೆ ಏಳಬಹುದು, ದಂಗೆಗಳನ್ನು ದಮನಿಸಲು ಸೈನ್ಯದ ಸೇವೆ ಸದಾ ಸಿದ್ಧವಿದೆ. ಆದರೆ ಇದೆಲ್ಲ ನಾವು ಕಟ್ಟಿದ ಸಾಮ್ರಾಜ್ಯದಲ್ಲಿ ಸಹಜ ಸಾಮಾನ್ಯ.

ಜನ ಕಣ್ಣಿದ್ದೂ ಕುರುಡರಂತೆ ಬುದ್ಧಿಯಿದ್ದೂ ದಡ್ಡರಂತೆ ಬಾಳಬಹುದು ನಾವು ಕಟ್ಟಿದ ಸಾಮ್ರಾಜ್ಯದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.