ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಲ ಸಂಗಮದ ದಾರಿ

Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕೂಡಲ ಸಂಗಮ ಕ್ಷೇತ್ರದಲ್ಲಿರುವ  ಕಲ್ಯಾಣಿ ಚಾಲುಕ್ಯರ ಕಾಲದ ಸಂಗಮೇಶ್ವರ ಮಂದಿರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ‘ಕೂಡಲ ಸಂಗಮ ಅಭಿವೃದ್ಧಿ ಮಂಡಳಿ’ ಇದೆಯಾ­ದರೂ ಇಲ್ಲಿ ಕೆಲವು ಸುಧಾರಣೆಗಳು ಆಗಬೇಕಿದೆ.

ಅಸ್ತಿತ್ವದಲ್ಲಿರುವ ಏಳು ಅಂತಸ್ತುಗಳ ವಚನ ಗುಮ್ಮಟವು ಖಾಲಿಯಿದ್ದು ಅಲ್ಲಿ ಕಾಲಕಾಲಕ್ಕೆ  ಸಾಂಸ್ಕೃತಿಕ ಉತ್ಸವಗಳು ನಡೆಯುತ್ತಿಲ್ಲ. ಅಡಿಹಾಳ ಗ್ರಾಮದಿಂದ ಸಂಗಮೇಶ್ವರ ಗುಡಿಯವರೆಗೆ ಸಾಗುವ ರಸ್ತೆಯನ್ನು ತಿಪ್ಪೆಗುಂಡಿ ಅತಿಕ್ರಮಿಸಿ­ಕೊಂಡಿದ್ದು ಆ ರಸ್ತೆಯ ಡಾಂಬರೀಕರಣ ಆಗಿಲ್ಲ.

ಸಂಪುಟದ ಅನು­ಮೋದನೆ ಸಿಕ್ಕರೂ ಸುಮಾರು ₨50 ಕೋಟಿ ಅಂದಾಜಿನ ಮಲಪ್ರಭಾ ಸೇತುವೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಇದ­ರಿಂದಾಗಿ ಮುದ್ದೇಬಿಹಾಳ ಕಡೆಯಿಂದ ಬರುವ ಯಾತ್ರಾರ್ಥಿಗಳು ಮಳೆಗಾಲದಲ್ಲಿ ಬಹಳ ತೊಂದರೆ ಅನುಭವಿಸು­ತ್ತಿದ್ದಾರೆ. ಸಂಬಂಧಪಟ್ಟ­ವರು ಕೂಡಲೇ ಇತ್ತ ಗಮನಹರಿಸಲಿ.
            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT