ಮಾಹಿತಿ ಯುಗದಲ್ಲಿ ಮಾನವನಿಗೆ ದಿನ-ನಿತ್ಯ ಮಾಹಿತಿಯ ಕಣಜ ಬೇಕಾಗುತ್ತೆ. ಮನೋರಂಜನೆಗಾಗಿ ದೇಶದಲ್ಲಿ ನೂರಕ್ಕಿಂತಲೂ ಹೆಚ್ಚು ಟಿ.ವಿ ಚಾನೆಲ್‌ಗಳಿವೆ.

ನಮ್ಮ ರಾಜ್ಯದಲ್ಲಿ ಏಳೆಂಟು ಚಾನೆಲ್‌ಗಳಿವೆ. ದೇಶದಲ್ಲಿ ಭಾರಿ ಸಂಖ್ಯೆಯಲ್ಲಿ ರೈತರಿದ್ದಾರೆ, ಆದರೆ ಕೃಷಿಗೆ ಪ್ರತ್ಯೇಕ ಟಿ.ವಿ ಚಾನೆಲ್ ಇಲ್ಲದಿರುವುದು ವಿಚಿತ್ರ.

ರಾಜ್ಯದಲ್ಲಿ ಕೃಷಿಗೆ ಒತ್ತುಕೊಟ್ಟು ವಲಯವಾರು ಕೃಷಿ ವಿಶ್ವವಿದ್ಯಾಲಯ ಪ್ರಾರಂಭಿಸಿರುವುದು ಉತ್ತಮ ಬೆಳವಣಿಗೆ. ಹಾಗೆಯೇ ಸಹಸ್ರಾರು ಜನರಿಗೆ ಕೆಲಸ ಕೊಟ್ಟಿರುವ ಕೃಷಿಗೆ ಪ್ರತ್ಯೇಕ ಟಿ.ವಿ ಚಾನೆಲ್ ಅತ್ಯವಶ್ಯಕವಾಗಿದೆ. ನೆರೆಯ ಕೇರಳದಲ್ಲಿ ಈಗಾಗಲೇ ಈ ಪ್ರಯತ್ನ ನಡೆದಿದೆ.

ಹವಾಮಾನ ವೈಪರೀತ್ಯ, ಬೆಳೆಯಲ್ಲಿನ ಏರುಪೇರು ಹಾಗೂ ಅತಿಯಾದ ಮಣ್ಣಿನ ಸವಕಳಿಯಿಂದಾಗಿ ಕೃಷಿ ಬದಲಾಗುತ್ತಿದೆ. ಕೆಲ ಟಿ.ವಿ ಚಾನೆಲ್‌ಗಳು ಅಪರೂಪಕ್ಕೆ ಕೆಲ ಕೃಷಿ ಸಂಬಂಧಿಸಿದ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿರುವುದು ಆಶಾದಾಯಕ. ಅಷ್ಟಕ್ಕೆ ಸೀಮಿತಗೊಳಿಸಿದರೆ ಸಾಲದು.

ಈಗಲಾದರೂ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಕೃಷಿಗಾಗಿ ಪ್ರತೇಕ ಟಿ.ವಿ ಚಾನೆಲ್ ಪ್ರಾರಂಭಿಸಿದರೆ ರೈತ ವರ್ಗಕ್ಕೆ ತುಂಬಾ ಉಪಯೋಗವಾದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.