ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ ವೀರಣ್ಣ ರಂಗಮಂದಿರ ಪುನರಾರಂಭಿಸಿ

Last Updated 21 ಜನವರಿ 2014, 19:30 IST
ಅಕ್ಷರ ಗಾತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಕರ್ನಾ­ಟಕದ ವೃತ್ತಿರಂಗಭೂಮಿಯವರಿಗೆ ಇರುವ ಏಕೈಕ ರಂಗಮಂದಿರ ‘ಗುಬ್ಬಿ ವೀರಣ್ಣ ರಂಗ ಮಂದಿರ’. ಕಳೆದ ಎರಡು ದಶಕಗಳಿಂದ ಕರ್ನಾ­ಟಕ­ದಲ್ಲಿರುವ 15-20 ನಾಟಕ ಕಂಪೆನಿಗಳು ಇಲ್ಲಿ ಸರದಿಯ ಮೇಲೆ ನಾಟಕಗಳನ್ನು ಪ್ರದರ್ಶಿಸುತ್ತ ಬಂದಿವೆ. ಒಂದೊಂದು ನಾಟಕ ಕಂಪೆನಿಗೆ ಒಂದು, ಒಂದೂವರೆ ವರ್ಷಗಳ ಕಾಲ ರಂಗಮಂದಿರವನ್ನು ಬಾಡಿಗೆಗೆ ನೀಡಲಾಗುತ್ತದೆ. ನಗರಪಾಲಿಕೆಗೆ ಇದರಿಂದ ಒಳ್ಳೆಯ ಆದಾಯವೂ ಇದೆ.

ವೈಭವದಿಂದ ಮೆರೆದ ವೃತ್ತಿ ರಂಗಭೂಮಿಯ ಪಳೆಯುಳಿಕೆಯನ್ನು ವೀಕ್ಷಿಸಬೇಕೆನ್ನುವ ರಾಜ­ಧಾನಿಯ ಮಂದಿಗೆ ಇದೊಂದೇ ಆಶ್ರಯ ತಾಣ ಇರುವುದು.

ಮೆಜೆಸ್ಟಿಕ್‌ ಪ್ರದೇಶದಲ್ಲಿ ಈ ರಂಗಮಂದಿರ ಇರುವುದರಿಂದ ಒಂದೆರಡು ದಿನ ಬೆಂಗಳೂ­ರಿನಲ್ಲಿ ಕೆಲಸಕ್ಕೆಂದು ಬಂದವರಲ್ಲಿ   ಸಾಕಷ್ಟು ಸಂಖ್ಯೆಯ ಪ್ರೇಕ್ಷಕರು ಇಲ್ಲಿ ನಾಟಕ ನೋಡಲು ಬರುತ್ತಾರೆ.

ಇನ್ನು ಕರ್ನಾಟಕದ ಬೇರೆ ಬೇರೆ ಭಾಗದಿಂದ ಬೆಂಗಳೂರಿಗೆ ಕೆಲಸಕ್ಕೆಂದು ಬರುವ ವೃತ್ತಿ ರಂಗಭೂಮಿ ಕಲಾವಿದರ ಭೇಟಿಯ ಸ್ಥಳವೂ ಈ ರಂಗಮಂದಿರ ಆಗಿದೆ. ರಾಜ್ಯದ ಒಟ್ಟು ವೃತ್ತಿ ಕಲಾವಿದರ ಕೂಡು ತಾಣವೇ ಇದಾಗಿದೆ. ನಗರದ ಹೃದಯ ಭಾಗದಲ್ಲಿರುವ ಇಂತಹ ಮಹತ್ವದ ರಂಗ ಮಂದಿರವನ್ನು ದುರಸ್ತಿಯ  ನೆಪದಲ್ಲಿ ಮುಚ್ಚಿ 7-8 ತಿಂಗಳೇ ಗತಿಸಿದವು. ಇದರಿಂದ ನಾಟಕ ಪ್ರೇಮಿಗಳು ವಂಚಿತರಾ ಗಿದ್ದಾರೆ. ದುರಸ್ತಿಗೆ ಎಷ್ಟು ದಿನ ಬೇಕು?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT