ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲ ನಿವಾರಿಸಿ

Last Updated 21 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಶಿಕ್ಷಕರ ನೇಮಕಾತಿಯಲ್ಲಿ ಇತ್ತೀಚೆಗೆ ಗೊಂದಲ­ಹೆಚ್ಚಾಗುತ್ತಿವೆ. 2013ರಲ್ಲಿ 4000 ಪ್ರಾಥಮಿಕ ಶಿಕ್ಷಕರ ನೇಮಕಕ್ಕೆ ಅಧಿ­ಸೂಚನೆ ಹೊರಡಿಸಿ, ಸ್ಥಗಿತ­ಗೊಳಿಸಲಾಗಿತ್ತು. ಸಂವಿಧಾನದ ಕಲಂ 371­ಜೆ ಅನುಷ್ಠಾನ­ಗೊಳಿಸುವ ಉದ್ದೇಶದಿಂದ ನೇಮಕ ಪ್ರಕ್ರಿಯೆ­ಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು.

ಆದರೆ, ಅರ್ಜಿ ಶುಲ್ಕ ₨ 420 ಹಿಂದಿರುಗಿಸಿಲ್ಲ. ಈಗ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿಇಟಿ)  ಕೇಂದ್ರೀ­ಕೃತ ದಾಖ­ಲಾತಿ  ಘಟಕದಿಂದ ಆದೇಶ ಹೊರಡಿಸಲಾಗಿದೆ. ಟಿ.ಇ.ಟಿಯಲ್ಲಿ ತೇರ್ಗಡೆ ಹೊಂದಿ ಅರ್ಹತೆ ಪಡೆ­ದರೆ ಮಾತ್ರ ಶಿಕ್ಷಕರ ನೇಮಕಕ್ಕೆ ಅರ್ಜಿ ಸಲ್ಲಿಸಲು ಸಾಧ್ಯ ಎಂದು ತಿಳಿಸಲಾಗಿದೆ.

ಹಾಗಾದರೆ, ನೇಮಕ ಪರೀಕ್ಷೆ ಯಾವ ರೀತಿ ಇರುತ್ತದೆ? ಟಿ.ಇ.ಟಿ, 1 ರಿಂದ 8ನೇ ತರಗತಿವರೆಗೆ ಶಿಕ್ಷಕರಾಗಲು ಮಾತ್ರ.  9 ಮತ್ತು 10ನೇ ತರಗತಿ ಶಿಕ್ಷಕರಾಗಲೂ ಏನು ಮಾಡಬೇಕು ಎಂಬುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT