ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದುಂಗುರ ಪ್ರಸಂಗ

ಅಕ್ಷರ ಗಾತ್ರ

ರಾಜ್ಯದ ಮುಖ್ಯಮಂತ್ರಿ ಕಟ್ಟಿದ ಬಹುಬೆಲೆಯ ಹ್ಯೂಬ್ಲೊ ವಾಚ್‌  ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ವಾಚ್‌ ಸಂಬಂಧವಾಗಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವಣ ವಾಕ್‌ ಸಮರ ಜನರಿಗೆ ಪುಕ್ಕಟೆ ಮನರಂಜನೆ ನೀಡಿದೆ.

ಆದರೆ ರಾಜ್ಯದ ಮುಖ್ಯಮಂತ್ರಿ ಆಗಿದ್ದವರೊಬ್ಬರ ಜೀವನದಲ್ಲಿ ಘಟಿಸಿದ ಚಿನ್ನದುಂಗುರದ ಪ್ರಸಂಗ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತಿದೆ.

ರಾಜ್ಯದ ಕೆಲವೇ ಕೆಲವು ಶ್ರೇಷ್ಠ ಮುಖ್ಯಮಂತ್ರಿಗಳಲ್ಲಿ  ರಾಮಕೃಷ್ಣ ಹೆಗಡೆ ಒಬ್ಬರು. ಅವರು ಮುಖ್ಯಮಂತ್ರಿಯಾದ ಮೇಲೆ, ಉತ್ತರ ಕನ್ನಡ ಜಿಲ್ಲೆಯ  ಸ್ವರ್ಣವಲ್ಲಿ ಮಠದ ಸ್ವಾಮೀಜಿ ದರ್ಶನ ಪಡೆಯಲು ಪತ್ನಿಯೊಂದಿಗೆ ತೆರಳುತ್ತಾರೆ. ಸ್ವಾಮೀಜಿ, ಹೆಗಡೆ ಅವರನ್ನು ಹಾರ ಶಾಲುಗಳಿಂದ ಸತ್ಕರಿಸಿ, ಅವರ ಬೆರಳಿಗೆ ಚಿನ್ನದುಂಗುರವನ್ನು ತೊಡಿಸಲು ಹೋಗುತ್ತಾರೆ.

ಆಗ ಹೆಗಡೆಯವರು ಅದನ್ನು ತಡೆದು, ತಾವು ಯಾವುದೇ ಚಿನ್ನ, ಬೆಳ್ಳಿ ಮತ್ತು ರತ್ನಗಳನ್ನು ದೇಹದ ಮೇಲೆ ಧರಿಸುವುದಿಲ್ಲವೆಂದು ಹೇಳಿ ಚಿನ್ನದುಂಗುರವನ್ನು ವಿನಮ್ರದಿಂದ ಹಿಂತಿರುಗಿಸುತ್ತಾರೆ. ಹೆಗಡೆಯವರ ಜೀವನದಲ್ಲಿ ಜರುಗಿದ ಚಿನ್ನದುಂಗುರದ ಪ್ರಸಂಗವನ್ನು ಕರ್ನಾಟಕದ ಜನ ಇನ್ನೂ ಮರೆತಂತಿಲ್ಲ! ಹಿಂದಿನ ಈ ಚಿನ್ನದುಂಗುರದ ಪ್ರಸಂಗ ಇಂದಿನ ವಾಚ್‌ ಹಗರಣಕ್ಕೆ ವಿವೇಕದ ಬೆಳಕು ಬೀರಬಹುದೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT