ನಿರೀಕ್ಷೆಯಂತೆ ನರೇಂದ್ರ ಮೋದಿ ಮೂರನೇ ಬಾರಿಯೂ ಭಾರೀ ಬಹುಮತದಿಂದ ಜಯಗಳಿಸಿದ್ದಾರೆ. ಕಳೆದ ಚುನಾವಣೆಗೆ ಹೋಲಿಸಿದರೆ ಎರಡು ಸ್ಥಾನಗಳನ್ನು ಕಡಿಮೆ ಪಡೆದಿದ್ದಾರೆ ಎಂಬುದನ್ನೇ ಪೂರ್ವಗ್ರಹ ಪೀಡಿತ ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡಿದರೂ ಕೇಶುಭಾಯಿ ಪಟೇಲರ ಪಕ್ಷ ಪಡೆದಿರುವ ಎರಡು ಸ್ಥಾನಗಳೂ ಪರೋಕ್ಷವಾಗಿ ಬಿ.ಜೆ.ಪಿ.ಯದೇ ತಾನೆ? ಬಿ.ಜೆ.ಪಿ. ಒಡೆಯದಿದ್ದರೆ ಬಹುಶಃ ಇನ್ನೂ ಕನಿಷ್ಠ 15 ರಿಂದ 20 ಸ್ಥಾನಗಳನ್ನು ಬಿ.ಜೆ.ಪಿ. ಪಡೆಯುತ್ತಿತ್ತು ಎಂಬುದು ಪ್ರತಿ ಕ್ಷೇತ್ರದ ಮತ ಎಣಿಕೆಯ ವಿವರದಿಂದ ತಿಳಿಯುತ್ತದೆ. ಶೇಕಡಾವಾರು ಮತ ಸಹಾ ಈ ಬಾರಿ ಹೆಚ್ಚಾಗಿದೆ.

ಈಗ ಚರ್ಚೆಯಾಗುತ್ತಿರುವುದು ಮೋದಿಯವರ ಮುಂದಿನ ನಡೆ ಏನು ಎಂಬ ಬಗ್ಗೆ. ಸಹಜವಾಗಿಯೇ ಬಿ.ಜೆ.ಪಿ.ಯ ಹಲವಾರು ಉನ್ನತ ನಾಯಕರುಗಳು ಈಗಾಗಲೇ ವ್ಯಕ್ತಪಡಿಸಿದಂತೆ ಮೋದಿ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಮೊಸರಿನಲ್ಲಿ ಕಲ್ಲು ಹುಡುಕುವ ರಾಜಕೀಯ ಪಂಡಿತರು ಗುಜರಾತಿನ 2002ರ ಘಟನೆಗಳನ್ನೇ ಮುಂದೆ ಮಾಡಿ `ಈ ಘಟನೆಗೆ ಕಾರಣರಾದ ಮೋದಿ ಅದು ಹೇಗೆ ತಾನೇ ಪ್ರಧಾನಿ ಅಭ್ಯರ್ಥಿಯಾಗಲು ಸಾಧ್ಯ?' ಎಂಬ ವಿತಂಡವಾದವನ್ನೇ ಮಾಡುತ್ತಾರೆ.

ಇತ್ತೀಚೆಗೆ ನಡೆದ ಟಿ. ವಿ. ವಾಹಿನಿಯೊಂದರಲ್ಲಿ ತೇಜಸ್ವಿನಿಯವರು ಇದನ್ನೇ ದೊಡ್ಡ ಸಂಗತಿಯಾಗಿ ಪ್ರಸ್ತಾಪಿಸಿದರು. ಹಾಗಿದ್ದರೆ ಇಂದಿರಾ ಗಾಂಧಿಯವರ ಹತ್ಯೆಯ ನಂತರ ದೆಹಲಿ ಮತ್ತಿತರ ಸ್ಥಳಗಳಲ್ಲಿ ನಡೆದ ಸಹಸ್ರಾರು ಜನ ಸಿಖ್ ಸಮುದಾಯದ ಜನರ ಮಾರಣಹೋಮದ ಬಗ್ಗೆ ಏನು ಹೇಳುತ್ತಾರೆ? ಈ ಸಾಮೂಹಿಕ ಹತ್ಯೆಗೆ ಕಾರಣರಾದ ಕಾಂಗ್ರೆಸ್ ಮುಖಂಡರ ಪಾತ್ರದ ಬಗ್ಗೆ ನ್ಯಾಯಾಲಯಗಳು ವ್ಯಕ್ತಪಡಿಸಿದ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಅಂತಹ ಕಾಂಗ್ರೆಸ್ ಮುಖಂಡರು, ಇಂದಿರಾ ಗಾಂಧಿ ಕುಟುಂಬದವರು ಯಾವ ಮುಖ ಇಟ್ಟುಕೊಂಡು ಪ್ರಧಾನಿ ಗದ್ದುಗೆಯ ಹಕ್ಕುದಾರರು ತಾವೇ ಎಂದು `ಪೋಸ್' ಕೊಡುತ್ತಾರೆ? ಸಿಖ್ ಸಮುದಾಯದವರ ಹತ್ಯೆಯ ಸಂದರ್ಭದಲ್ಲಿ ಪ್ರಧಾನಿಯಾಗಿದ್ದವರು ರಾಜೀವ್ ಗಾಂಧಿಯವರೇ ಅಲ್ಲವೆ? ಇದರ ಬಗ್ಗೆ ಕಾಂಗ್ರೆಸ್ ನಾಯಕರ ದಿವ್ಯ ಮೌನದ ಅರ್ಥ ಜನತೆಗೆ ತಿಳಿಯುವುದಿಲ್ಲವೆ? ಗಾಜಿನ ಮನೆಯಲ್ಲಿ ಕುಳಿತವರು ಬೇರೆಯವರ ಮೇಲೆ ಕಲ್ಲು ತೂರಬಾರದು ಎಂಬ ಸಾಮಾನ್ಯ ಜ್ಞಾನವೂ ಕಾಂಗ್ರೆಸ್ಸಿನವರಿಗೆ ಇಲ್ಲ ಎಂದು ಭಾವಿಸಬೇಕೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.