ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಂಡಾವರ್ತಿ ಹೇಳಿಕೆ

ಅಕ್ಷರ ಗಾತ್ರ

ಪ್ರಸ್ತುತ ರಾಜ್ಯದಲ್ಲಿ ಕಾನೂನು ಮತ್ತು ಆಡಳಿತ ವ್ಯವಸ್ಥೆ ಚೆನ್ನಾಗಿದೆ. ಬರದ ಬೇಗೆ ನಿಯಂತ್ರಿಸಲು ಮುಖ್ಯಮಂತ್ರಿ ಸೇರಿದಂತೆ ಸಚಿವರ ನಾಲ್ಕು ಉಪ ಸಮಿತಿ ತಂಡಗಳು  ಬಿಸಿಲ ಬೇಗೆಯನ್ನು ಲೆಕ್ಕಿಸದೆ ರಾಜ್ಯ ಸುತ್ತಿದರೂ, ಸರ್ಕಾರ ಸತ್ತಿದೆಯೆಂದು ಪದೇಪದೇ ಹೇಳುವ, ವಿಧಾನಸೌಧಕ್ಕೆ ಎರಡು ಲಕ್ಷ ಜನರೊಂದಿಗೆ ನುಗ್ಗಿ ಮುಖ್ಯಮಂತ್ರಿಯನ್ನು ಕೆಳಗಿಳಿಸುತ್ತೇನೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಮಾತುಗಳು ದುಂಡಾವರ್ತಿ ಮತ್ತು ಹಾಸ್ಯಾಸ್ಪದ ಎನಿಸುತ್ತವೆ.

ಸಂವಿಧಾನಬದ್ಧವಾಗಿ ಅಧಿಕಾರ ವಹಿಸಿಕೊಂಡ ಮುಖ್ಯಮಂತ್ರಿಯನ್ನು ಬಹುಮತವಿದ್ದಾಗಲೂ ಕೆಳಗಿಳಿಸಲು ಸಾಧ್ಯವೇ? ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ? ಈ ಕುರಿತು ಭಾಷಣ ಮಾಡುವಾಗ ಯಡಿಯೂರಪ್ಪನವರು ರಾಜಪ್ರಭುತ್ವದ ಭ್ರಮೆಯಲ್ಲಿದ್ದರೋ ಅಥವಾ ಇವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲವೋ  ತಿಳಿಯುತ್ತಿಲ್ಲ.

ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಅಷ್ಟೇ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು ಅವರೂ ನಾಲ್ಕು ಲಕ್ಷ ಜನ ಸೇರಿಸುವುದಾಗಿ ಪ್ರತಿ ಸವಾಲು ಹಾಕಿದ್ದಾರೆ. ಆದರೆ ಇಂಥ ದುಂಡಾವರ್ತಿ ಮಾತುಗಳು ಆಡಳಿತ ಪಕ್ಷದವರಿಗಾಗಲಿ, ಪ್ರತಿಪಕ್ಷದವರಿಗಾಗಲಿ ಯಾರಿಗೂ ಶೋಭೆ ತರುವುದಿಲ್ಲ. ನಾಯಕರು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಅರ್ಹ ಟೀಕೆ, ಹೇಳಿಕೆಗಳನ್ನು ನೀಡಿದರೆ ಮಾತ್ರ ಎಲ್ಲರೂ ಸ್ವಾಗತಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT