ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಕಳಂಕ!

ಅಕ್ಷರ ಗಾತ್ರ

ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ಇಲ್ಲದ ಅಸಹಿಷ್ಣುತೆ ಕಳಂಕ ಭಾರತ ದೇಶಕ್ಕೆ ಮಾತ್ರ ಏಕೆ?– ನಮ್ಮ ಸಂವಿಧಾನ ಒಪ್ಪಿಕೊಂಡ ಮಹೋನ್ನತ ‘ಧರ್ಮನಿರಪೇಕ್ಷ’ ತತ್ವಸಿದ್ಧಾಂತ. ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವದ ನೀತಿಯನ್ನು ಹೊಂದಿದ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ಈ ದೇಶದಲ್ಲಿರುವ ಬಹುಸಂಖ್ಯಾತ ಧರ್ಮದವರೊಂದಿಗೆ ಹೊರಗಿನಿಂದ ಬಂದ ಧರ್ಮದವರಿಗೂ ಬಾಳಲು ಸಮಾನ ಗೌರವ ಕಲ್ಪಿಸಿಕೊಟ್ಟಿದೆ ದೇಶದ ಸಾಂವಿಧಾನಿಕ ‘ಧರ್ಮನಿರಪೇಕ್ಷ’ ತತ್ವ.

ಪ್ರಜಾತಂತ್ರ ಇರುವ ಮತ್ತು ಇಲ್ಲದಿರುವ ಜಗತ್ತಿನ ರಾಷ್ಟ್ರಗಳಲ್ಲಿ ‘ಧರ್ಮನಿರಪೇಕ್ಷ’ ನೀತಿ ಇಲ್ಲದಿರುವುದರಿಂದ ಅಲ್ಲಿ ಅಸಹಿಷ್ಣುತೆಯ ಆರೋಪ ಉದ್ಭವಿಸುವುದಿಲ್ಲ.  ತಮ್ಮ ದೇಶದ ಬಹುಸಂಖ್ಯಾತ ಧರ್ಮವೊಂದನ್ನು ದೇಶದ ಪ್ರಮುಖ ಧರ್ಮವೆಂದು ಸಾಂವಿಧಾನಿಕವಾಗಿ ಒಪ್ಪಿಕೊಂಡು, ಮಿಕ್ಕ ಅಲ್ಪಸಂಖ್ಯಾತ ಧರ್ಮಗಳು ಮುಖ್ಯವಾಹಿನಿಯಲ್ಲಿ ಸಾಗಬೇಕೆಂಬುದು ಅರಬ್‌ ಹಾಗೂ ಕೆಲವು ಪಾಶ್ಚಾತ್ಯ ದೇಶಗಳ ನೀತಿ.

ಇದರಿಂದ ಅಲ್ಲಿ ಸಹಿಷ್ಣುತೆ– ಅಸಹಿಷ್ಣುತೆಗಳ ನಡುವೆ ಘರ್ಷಣೆಗೆ ಆಸ್ಪದವಿರುವುದಿಲ್ಲ. ಭಾರತದ ಸಂವಿಧಾನದತ್ತವಾದ ಧರ್ಮನಿರಪೇಕ್ಷ ನೀತಿಯನ್ನು ಕೆಲವರು ತಮ್ಮ ಮೂಗಿನ ನೇರಕ್ಕೆ ತಪ್ಪಾಗಿ ಗ್ರಹಿಸುವುದರಿಂದಲೂ, ಮತ್ತೆ ಕೆಲವರು ಅಲ್ಪಸಂಖ್ಯಾತರ ಮತ ಸೆಳೆದುಕೊಳ್ಳುವ ಲಾಭಕ್ಕೆ ಕೀಳು ರಾಜಕೀಯದಿಂದಲೂ ದುರುಪಯೋಗಿಸಿಕೊಳ್ಳುವ ಮೂಲಕ ಅಸಹಿಷ್ಣುತೆ ಹುಟ್ಟು ಹಾಕಿ ದೇಶದಲ್ಲಿ ಅಶಾಂತಿಯನ್ನು ಹರಡುತ್ತಿದ್ದಾರೆ. ಧರ್ಮನಿರಪೇಕ್ಷ ನೀತಿ ಇರುವವರೆಗೂ ರಾಜಕೀಯ ಹಿತಾಸಕ್ತರಿಂದ ದೇಶಕ್ಕೆ ಅಸಹಿಷ್ಣುತೆ ಕಳಂಕ ತಪ್ಪಿದ್ದಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT