ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಕವಿವರ್ಯರು ಮಾಡಿದ್ದೇನು?

Last Updated 28 ಮೇ 2014, 19:30 IST
ಅಕ್ಷರ ಗಾತ್ರ

 ‘ಗಾಂಧೀಜಿ ತಮ್ಮ ಪ್ರಾಣ ಒತ್ತೆ ಇಟ್ಟು ದಲಿತರ ಪ್ರತ್ಯೇಕ ಮತದಾನದ ಹಕ್ಕು ಕಸಿದುಕೊಂಡರು’ ಎಂಬು­ದಾಗಿ ಕವಿ ಸಿದ್ದಲಿಂಗಯ್ಯ ಅವರು ತುಮಕೂರು ವಿಶ್ವವಿದ್ಯಾಲಯ ಆಯೋಜಿಸಿದ್ದ ಅಂಬೇಡ್ಕರ್‌– ಜಗಜೀವನ­­ರಾಂ ಜಯಂತಿಯಲ್ಲಿ ಹೇಳಿದ್ದಾರೆ (ಪ್ರ.ವಾ., ಮೇ 25).

‘ಈ ಕಾನೂನು ಮಾಡಿ ದಲಿತರನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸುವುದು ಬೇಡ’ ಎಂಬ ವಿಶಾಲಾರ್ಥದಲ್ಲಿ ಮಹಾತ್ಮ ಗಾಂಧಿ ಈ ರೀತಿ ಮಾಡಿದರು. ಆದರೆ ಅಂಬೇಡ್ಕರ್‌ ಅವರ ಸ್ವಾಭಿ­ಮಾ­ನದ ಬಗ್ಗೆ ಮಾತನಾಡುವ ನಮ್ಮ ಕವಿ ಏನು ಮಾಡಿದ್ದಾರೆ? ರಾಮ­ಕೃಷ್ಣ ಹೆಗಡೆ ನೀಡಿದ ಎಂಎಲ್‌ಸಿ ಪಟ್ಟಕ್ಕಾಗಿ ಪ್ರೊ. ಬಿ. ಕೃಷ್ಣಪ್ಪ ಜೀವ ತೇದು ಕಟ್ಟಿದ್ದ ಡಿಎಸ್ಎಸ್‌ನ ಸಮಾಧಿ ಮಾಡಿ­ದರು! ಇವರಿಗೂ ಮೊದಲೆ ಪ್ರೊ. ಕೃಷ್ಣಪ್ಪನವರು ಕ್ರಾಂತಿ­ಕವಿತೆಗಳನ್ನು (‘ನೆನಪು­ಗಳೆ ನಿಲ್ಲಿ ನಿಲ್ಲಿ’) ಬರೆ­ದಿದ್ದರೂ, ಪ್ರಕಟಿಸದೇ ಇದ್ದ ಕಾರಣ ಇವರು ಪ್ರಥಮ ದಲಿತಕವಿ ಎಂದೂ ಹೆಸರಾದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT