ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆಯನ್ನು ನಾರಾಯಣಮೂರ್ತಿಯವರು ಮಾಡಿದರೆ ತಪ್ಪಲ್ಲ ಎಂದು ಡಾ. ಡಿ. ಎಂ. ಶಂಕರ್ ಅವರು (ವಾ. ವಾ. ಮಾ. 3) ಬರಗೂರರ ಪತ್ರವನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ್ದಾರೆ.

ಹೇರಳ ಅವಕಾಶವಿದ್ದೂ ಇಲ್ಲಿಯವರೆಗೆ ಯಾವುದೇ ಕನ್ನಡ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸದ ನಾರಾಯಣಮೂರ್ತಿ ಅವರು, ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪ್ರಾಥಮಿಕ ಶಿಕ್ಷಣ ಕೂಡ ಆಂಗ್ಲ ಮಾಧ್ಯಮದಲ್ಲಿದ್ದರೆ ತಪ್ಪೇನಿಲ್ಲ. ಅದು ಅನಿವಾರ್ಯ ಕೂಡ ಎಂದು ಮಾತನಾಡುತ್ತಾರೆ. ಯಾವುದೇ ಬದ್ಧತೆ ಇಲ್ಲದ ಇಂಥವರಿಗೆ ಉದ್ಯಮ ವಿಸ್ತಾರವಾಗುವುದೇ ಪ್ರಮುಖ ಅಜೆಂಡವಾಗಿರುತ್ತದೆ.

ಡಾ. ಶಂಕರ್ ಅಭಿಪ್ರಾಯದ ಪ್ರಕಾರ ಕನ್ನಡ ಮಾತನಾಡಲು ಬಂದರೆ ಸಾಕು ಉದ್ಘಾಟನೆಗೆ ಯಾರಾದರೂ ಪರವಾಗಿಲ್ಲ, ನಿಜ. ಆದರೆ ವಿಶ್ವಕನ್ನಡ ಸಮ್ಮೇಳನ ಹೆಚ್ಚು ಅರ್ಥಪೂರ್ಣವಾಗಿರಬೇಕು. ಆ ದಿಶೆಯಲ್ಲಿ ಸರ್ಕಾರ ಪ್ರಯತ್ನ ಮಾಡಲಿ.
- ಉಮೇಶ್ ಕುಮಾರ್ ಎಸ್.,ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.