ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಪಾಲಿಸಲಿ

Last Updated 11 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಸುಗಮ ಸಂಚಾರಕ್ಕಾಗಿ ಸಾರಿಗೆ ಇಲಾಖೆ ರೂಪಿಸಿರುವ ನಿಯಮ, ಖಾಸಗಿ ವಾಹನಗಳಿಗೆ ಒಂದೇ ರೀತಿ ಇದ್ದರೂ ಸರ್ಕಾರಿ ವಾಹನಗಳಿಗೆ ಅನ್ವಯವಾಗುವುದು ತೀರಾ ವಿರಳ.

ಸರ್ಕಾರಿ ಬಸ್ಸುಗಳಲ್ಲಿ ನಿಗದಿತ ಆಸನಗಳ ಸಂಖ್ಯೆ 54+2 ಇದ್ದರೆ ಬಹುತೇಕ ಬಸ್ಸುಗಳಲ್ಲಿ 70ರಿಂದ 80 ಜನರು ಸಂಚರಿಸುವುದು ಸಾಮಾನ್ಯ. ಹೀಗೆ ನಿಗದಿಗಿಂತ ಹೆಚ್ಚಿನ ಜನರನ್ನು ತುಂಬಿಸಿಕೊಂಡು ಸಂಚರಿಸುವ ಸರ್ಕಾರಿ ಬಸ್ಸುಗಳು ಅಧಿಕಾರಿಗಳಿಗೆ ಕಾಣಿಸುವುದಿಲ್ಲವೇ? ಅಪಘಾತವಾದಾಗ ಮಾತ್ರ ನಿಯಮ ನೆನಪಾಗುವುದೇ?

ವಾಹನಗಳ ಗಾಜಿಗೆ ಕಪ್ಪು ಬಣ್ಣದ ಫಿಲ್ಮ್‌ ಅಂಟಿಸುವುದನ್ನು (ಟಿಂಟೆಡ್‌)  ನಿಷೇಧಿಸಿದ್ದರೂ ಹಲವು ಸರ್ಕಾರಿ ಬಸ್ಸುಗಳಲ್ಲಿ ಇಂದಿಗೂ ಇಂತಹ ಗಾಜುಗಳ ಬಳಕೆ ಮುಂದುವರಿದಿದೆ. ಇವೆಲ್ಲ  ನಿಯಮ ಉಲ್ಲಂಘನೆ ಅಲ್ಲವೇ? ಅಧಿಕಾರಿಗಳು, ಸರ್ಕಾರಿ ಬಸ್ಸುಗಳಿಗೂ  ನಿಯಮಗಳು ಕಟ್ಟುನಿಟ್ಟಾಗಿ ಅನ್ವಯವಾಗುವಂತೆ ಮಾಡಿದರೆ ಅನೇಕ  ದುರಂತಗಳನ್ನು ತಡೆಗಟ್ಟಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT