ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬಾಯಿತಪ್ಪಿದ ನಿತೀಶ್‌

Published 11 ಮೇ 2024, 15:49 IST
Last Updated 11 ಮೇ 2024, 15:49 IST
ಅಕ್ಷರ ಗಾತ್ರ

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ಮತ್ತೊಮ್ಮೆ ಬಾಯಿತಪ್ಪಿ ಮಾತನಾಡಿದ್ದು, ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ದಿವಂಗತ ರಾಮ್ ವಿಲಾಸ್‌ ಪಾಸ್ವಾನ್‌ ಅವರಿಗೆ ಮತ ಹಾಕುವಂತೆ ಕೇಳಿದ ಪ್ರಸಂಗ ನಡೆದಿದೆ. ಪಾಸ್ವಾನ್‌ ಅವರು 2020 ರಲ್ಲಿ ನಿಧನರಾಗಿದ್ದರು.

ತಪ್ಪನ್ನು ಅರಿತ ಕೂಡಲೇ ಸರಿಪಡಿಸಿಕೊಂಡ ಅವರು, ‘ರಾಮ್ ವಿಲಾಸ್ ಪಾಸ್ವಾನ್ ಅಲ್ಲ. ಅವರ ಪುತ್ರ ಚಿರಾಗ್ ಪಾಸ್ವಾನ್ ಅವರಿಗೆ ಮತ ನೀಡಿ’ ಎಂದು ಮನವಿ ಮಾಡಿದರು. ಹಾಜಿಪುರ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಚಿರಾಗ್‌ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಪಾಲ್ಗೊಂಡರು.

ನಿತೀಶ್‌ ಅವರು ಪ್ರಚಾರ ಸಭೆಯಲ್ಲಿ ಬಾಯಿತಪ್ಪಿ ಮಾತಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಎರಡು ಸಲ ‘ಎನ್‌ಡಿಎ ಮೈತ್ರಿಕೂಟವು ಲೋಕಸಭಾ ಚುನಾವಣೆಯಲ್ಲಿ 4,000ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತದೆ’ ಎಂದಿದ್ದರು. ಪ್ರಧಾನಿ ಮೋದಿ ಅವರ ಸಮ್ಮುಖದಲ್ಲೇ ಮುಜುಗರಕ್ಕೀಡಾಗುವ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT