ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷ್ಠೆಗೆ ಕಿಮ್ಮತ್ತಿಲ್ಲ

Last Updated 1 ಜೂನ್ 2016, 19:47 IST
ಅಕ್ಷರ ಗಾತ್ರ

ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿಗೆ ಚುನಾವಣೆಗಳು ನಡೆಯುತ್ತಿವೆ. ಈ ಚುನಾವಣೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಕಣಕ್ಕೆ ಇಳಿಸಿರುವ  ಅಭ್ಯರ್ಥಿಗಳ ಹಿನ್ನೆಲೆ ಗಮನಿಸಿದಾಗ ಪಕ್ಷಗಳ ಆದ್ಯತೆ ಏನು ಎಂಬುದೇ ತಿಳಿಯುತ್ತಿಲ್ಲ. ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯೊಂದೇ ಮಾನದಂಡ ಎಂಬುದು ನಿಚ್ಚಳವಾಗುತ್ತದೆ.

ಪಕ್ಷನಿಷ್ಠೆ, ತತ್ವನಿಷ್ಠೆಗಳಿಗೆ ಯಾವ ಬೆಲೆಯೂ ಇದ್ದಂತೆ ಕಾಣುವುದಿಲ್ಲ. ರಾಮ್‌ ಜೇಠ್ಮಲಾನಿಯವರು ಈ ಸಲ ರಾಜ್ಯಸಭೆಗೆ ಬಿಹಾರದಿಂದ ಆರ್‌ಜೆಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. 2010ರಲ್ಲಿ ಅವರು ಬಿಜೆಪಿ ಮೂಲಕ ರಾಜ್ಯಸಭೆಯಲ್ಲಿ ಸ್ಥಾನ ಪಡೆದಿದ್ದರು. ಆಗ ಬಿಜೆಪಿ.

ಈಗ, ಆ ಪಕ್ಷದ ಸಿದ್ಧಾಂತಕ್ಕೆ ತದ್ವಿರುದ್ಧವಾದ ನಿಲುವು ಹೊಂದಿರುವ ಆರ್‌ಜೆಡಿ ಅಂಗಳ! ಜೇಠ್ಮಲಾನಿ ಅವರಿಗೆ ನಿಷ್ಠೆ ಬದಲಿಸುವುದೆಂದರೆ ಅಂಗಿ ಬದಲಿಸಿದಂತೆ! ಈ ವಯಸ್ಸಿನಲ್ಲೂ ಅವರಿಗೆ ರಾಜ್ಯಸಭೆಯಲ್ಲಿ ಮುಂದುವರೆಯುವ ಆಸೆ! ಅಂತಹ ಆಸೆಗೆ ನೀರೆರೆಯುವ ಪಕ್ಷಗಳಿಗೂ ಕೊರತೆ ಇಲ್ಲ. ಮುಂದೊಂದು ದಿನ ಅವರು ಕಾಂಗ್ರೆಸ್‌ ಅಥವಾ ಎಡಪಕ್ಷಗಳನ್ನು ಅಪ್ಪಿಕೊಂಡರೂ ಆಶ್ಚರ್ಯವಿಲ್ಲ.

ರಾಜಕೀಯ ಪಕ್ಷಗಳು ಇನ್ನಾದರೂ ಇಂತಹ ಗೋಸುಂಬೆಗಳಿಗೆ ಮಣೆ ಹಾಕದೆ ತತ್ವ–ಸಿದ್ಧಾಂತಗಳಿಗೆ ಬೆಲೆ ಕೊಡುವ ನಿಷ್ಠಾವಂತರನ್ನು ಬೆಂಬಲಿಸಿದರೆ ಹಿರಿಯರ ಸದನ ಎಂಬ ಗೌರವಕ್ಕೆ ಪಾತ್ರವಾದ ರಾಜ್ಯಸಭೆ ಅಥವಾ ವಿಧಾನ ಪರಿಷತ್ತುಗಳ ಘನತೆ ಉಳಿದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT