ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿಸಂಹಿತೆ ಉಲ್ಲಂಘನೆ ಅಲ್ಲವೆ?

Last Updated 13 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಚುನಾವಣಾ ನೀತಿಸಂಹಿತೆ ಜಾರಿಗೆ ಬಂದ ನಂತರ ಯಾರಾದರೂ ಮದುವೆ, ಮುಂಜಿ, ಗೃಹಪ್ರವೇಶ ಮುಂತಾದವುಗ­ಳನ್ನು ನಡೆಸುವುದಿದ್ದರೂ ಅದಕ್ಕೆ ಅನು­ಮತಿ ಪಡೆದುಕೊಳ್ಳಬೇಕೆಂದು  ಚುನಾ­ವಣಾಧಿಕಾರಿ ತಾಕೀತು ಮಾಡು­­ತ್ತಾರೆ.

ಅಂತಹ ಸಮಾ­ರಂಭ­ಗಳಲ್ಲಿ ಯಾರಾ­ದರೂ ಬಂಧು­ ಮಿತ್ರರು, ರಾಜ­ಕೀಯ ಧುರೀಣರು ಭಾಗವಹಿಸಿದ­ರಂತೂ  ಸಮಾರಂಭದ ಇಡೀ ಖರ್ಚನ್ನು ಅಂತಹ ಧುರೀಣರ ಪಕ್ಷದ ಅಥವಾ ಅಭ್ಯರ್ಥಿಯ ಲೆಕ್ಕಕ್ಕೆ ಹಾಕ­ಲಾ­ಗು­ತ್ತದೆ. ಇದರಿಂದಾಗಿ ಅನೇಕ ಸಾರಿ ತಮ್ಮ ಹತ್ತಿರದ ಬಂಧುಗಳ  ಸಮಾ­ರಂಭ­ಗಳಿಗೆ ರಾಜಕೀಯ ಮುಖಂಡರು ಹೋಗಲೂ ಹೆದರುವ ಪರಿಸ್ಥಿತಿ ಬಂದೊದಗಿದೆ.

ಆದರೆ ಇತ್ತೀ­ಚೆಗೆ ರಾಜ್ಯ ಸರ್ಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ ಏರಿಸುವ ಪ್ರಸ್ತಾ­ವಕ್ಕೆ ಚುನಾ­ವಣಾ ಆಯೋಗ ಅನುಮತಿ ನೀಡಿ­ರು­ವುದಾಗಿ ವರದಿ­ಯಾಗಿದೆ. ಇದು ನೇರ­ ಆಮಿಷ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ. ಇದರಿಂದ ಆಡಳಿತ ಪಕ್ಷಕ್ಕೆ ಖಂಡಿತ ಲಾಭವಾಗುತ್ತದೆ ಎಂಬುದನ್ನು ಊಹಿಸ­ಬಹುದು. ಹಾಗಾದರೆ, ಇದು ನೀತಿ ಸಂಹಿತೆ ಉಲ್ಲಂಘನೆ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT