ಚುನಾವಣಾ ದಿನ ಹತ್ತಿರ ಬರುತ್ತಿದೆ. ಪಕ್ಷಗಳು ಬಿಡುಗಡೆ ಮಾಡುವ ಪ್ರಣಾಳಿಕೆಗಳಲ್ಲಿ ಎಷ್ಟು ಭರವಸೆಗಳು ಈಡೇರುತ್ತವೆ ಎಂಬುದನ್ನು ಪಕ್ಕಕ್ಕಿಟ್ಟು ನೋಡಿದರೆ, ಕನಿಷ್ಠ ಪಕ್ಷ ಅಂತಹ ವಿಚಾರಗಳ ಬಗ್ಗೆ ಪಕ್ಷಗಳಿಗೆ ಅರಿವಿದೆ ಎಂಬುದಾದರೂ ತಿಳಿಯುತ್ತದೆ.

ಎಲ್ಲ ಪಕ್ಷಗಳೂ ಪ್ರಣಾಳಿಕೆಗಳ ಮೂಲಕ ಜನರನ್ನು ತಕ್ಷಣಕ್ಕೆ ಖುಷಿ ಪಡಿಸಲು ಮುಂದಾಗಿದ್ದುದು ಹಿಂದಿನ ಚುನಾವಣೆಗಳ ಸಂದರ್ಭದ ಪ್ರಣಾಳಿಕೆ ನೋಡಿದರೆ ಸ್ಪಷ್ಟವಾಗುತ್ತದೆ. ನಮ್ಮೆಲ್ಲರ ಇರುವಿಕೆಗೆ, ನೆಮ್ಮದಿಗೆ ಕಾರಣವಾಗುವ ನೆಲ-ಜಲ, ಕಾಡು, ಪ್ರಾಣಿ-ಪಕ್ಷಿ ಇವೇ ಮೊದಲಾದವುಗಳ ಬಗ್ಗೆ ಯಾರೂ ಪ್ರಮುಖವಾಗಿ ಪ್ರಸ್ತಾಪಿಸಿಲ್ಲ.

ನಾವೆಲ್ಲರೂ ನೆಮ್ಮದಿಯಿಂದ ಬದುಕಬೇಕಾದರೆ ಸ್ವಚ್ಛಪರಿಸರ ಅತ್ಯಗತ್ಯ. ಈ ನಿಟ್ಟಿನಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವ ಪಕ್ಷಗಳ ಬದ್ಧತೆ ಮುಖ್ಯವಾಗುತ್ತದೆ. ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಪರಿಸರ ಸಂರಕ್ಷಣೆಯನ್ನು ಪ್ರಮುಖ ವಿಷಯವನ್ನಾಗಿ ಪರಿಗಣಿಸಬೇಕು. ಅಲ್ಲಿ ಪ್ರಸ್ತಾಪಿಸಲಾಗುವ ವಿಷಯಗಳೇ ಪಕ್ಷಗಳ ಮುಂದಿನ ಕಾರ್ಯಸೂಚಿಗಳಾಗಿರುವುದರಿಂದ, ಪರಿಸರ ಕೇಂದ್ರೀಕೃತ ಸುಸ್ಥಿರ ಅಭಿವೃದ್ಧಿಯೆಡೆಗೆ ಪಕ್ಷ ಹೊಂದಿರುವ ದೃಷ್ಟಿಕೋನ ನಿಚ್ಚಳವಾಗುತ್ತದೆ.

ಅದರ ಸೂಕ್ತ ಅನುಷ್ಠಾನವೂ ಅಷ್ಟೇ ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.