ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಚ್‌.ಡಿ.ಗಿಂತ ಪ್ರತಿಭೆ ದೊಡ್ಡದು

Last Updated 29 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಸಚಿವೆ ಉಮಾಶ್ರೀ ಅವರ ಪಿಎಚ್. ಡಿ. ಕನಸು ನನಸಾ­ಗಲಿಲ್ಲ. ನಿಯಮಗಳ ಉಲ್ಲಂಘನೆ ಕಾರಣಕ್ಕೆ ಪಿಎಚ್‌.ಡಿ. ಗಳಿಸುವ ಅವರ ಉದ್ದೇಶಕ್ಕೆ ಧಕ್ಕೆ ಬಂದಿರುವುದೇನೋ ಸರಿ. ಉಮಾಶ್ರೀ ಅವರು ಸಚಿವರೂ ಆಗಿದ್ದಾರೆ ಎಂಬ ಕಾರಣಕ್ಕೆ, ಅವರಿಗೆ ಅನುಕೂಲ ಕಲ್ಪಿಸಿಕೊಡುವ ಸಲು­ವಾಗಿ­ಯೇ ನಿಯಮಗಳನ್ನು ಸಡಿಲಗೊಳಿಸಲಾಗಿದೆ ಎಂಬ ಆರೋಪಗಳಲ್ಲಿ ಹುರುಳಿಲ್ಲದಿಲ್ಲ. ಉಮಾಶ್ರೀ ಪ್ರಭಾವ ಬೀರಿರಬಹುದು ಅಥವಾ  ಸಚಿವರು ಈ ರೇಸಿನಲ್ಲಿ ಇದ್ದಾರೆ ಎಂಬ ಕಾರಣಕ್ಕೆ ಭಟ್ಟಂಗಿ ಅಧಿಕಾರಿಗಳೇ ಹೀಗೆ ಮಾಡಿರಬಹುದು.

ಉಮಾಶ್ರೀ ಕನ್ನಡ ರಂಗಭೂಮಿ ಕಂಡ ಶ್ರೇಷ್ಠ ನಟಿಯರಲ್ಲಿ ಒಬ್ಬರು.  ಸಿನಿಮಾಗಳಲ್ಲೂ ತಮ್ಮ ನಟನೆಯ ಪ್ರಭೆಯಿಂದ ದೊಡ್ಡ ಹೆಸರು ಮಾಡಿದ್ದಾರೆ. ಉಮಾಶ್ರೀ ಅವರ ನಟನೆಯ ಸಾಮರ್ಥ್ಯಕ್ಕೆ ಯಾವುದೇ ವಿಶ್ವವಿದ್ಯಾಲಯ  ಡಾಕ್ಟರೇಟ್‌ ಪದವಿ ನೀಡಬಹುದಾಗಿದೆ.  ಏನೇ ಆಗಲಿ ಅವರ ಸಚಿವ ಪದವಿ ಇಂದು ಇರಬಹುದು, ನಾಳೆ ಹೋಗಬಹುದು. ಆದರೆ ಅವರ ನಟಿಯ ಸ್ಥಾನವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT