ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು ಅವುಗಳ ತನಿಖೆಗೆ ಸಾಕಷ್ಟು ಸಿಬ್ಬಂದಿ ಇಲ್ಲ ಎಂಬ ವಾದ ಮುಂದಿಡಲಾಗುತ್ತಿದೆ. ಅದು ನಿಜವಿದ್ದರೂ ಇರುವ ಸಿಬ್ಬಂದಿಯನ್ನು ಸರಿಯಾಗಿ ಬಳಸಿಕೊಳ್ಳದಿರುವುದು ಸಮಸ್ಯೆಯ ತೀವ್ರತೆಗೆ ಕಾರಣ ಎಂಬುದೇ ವಾಸ್ತವ ಸಂಗತಿ.

ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣ ಮತ್ತು ತನಿಖೆ ಹಾಗೂ ಸಂಚಾರ ನಿರ್ವಹಣಾ ವಿಭಾಗಗಳೆಲ್ಲದರಲ್ಲೂ ಸಿಬ್ಬಂದಿಯ ಅಗತ್ಯ ಇದ್ದರೂ ಪೊಲೀಸರನ್ನು ಅನಗತ್ಯ ಕೆಲಸಗಳಿಗೆ ನೇಮಿಸುತ್ತಾರೆ. ಬೇಕೋ ಬೇಡವೋ ಎಂಬುದರ ಅರಿವೆ ಇಲ್ಲದೆ ಪ್ರತಿಷ್ಠೆಗಾಗಿ ಹಾಲಿ, ಮಾಜಿ ಜನಪ್ರತಿನಿಧಿಗಳಿಗ್ಲ್ಲೆಲ ಕಾವಲು ಭಟರನ್ನು ನೀಡುವುದು, ವಿಐಪಿ, ವಿವಿಐಪಿ ಧುರೀಣರ ಭದ್ರತೆಗೆ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ನೇಮಕ, ಅಧಿಕಾರಿಗಳ ಕಚೇರಿ, ಮನೆಗಳಿಗೆ, ಕೈಗೊಬ್ಬ ಕಾಲಿಗೊಬ್ಬ ಆರ್ಡರ್ಲಿಗಳ ಸೇವೆ, ದೀರ್ಘ ರಜೆ ಮೇಲೆ ಹೋದರೂ 2-3 ಸರ್ಕಾರಿ ಕಾರುಗಳ ಸೇವೆ, ಅದಕ್ಕೆ ಚಾಲಕ ವರ್ಗದ ನೇಮಕ, ಹೀಗೆ ಮಾನವ ಬಲ ಪೋಲಾಗುತ್ತಿರುವಾಗ ಸಿಬ್ಬಂದಿ ಕೊರತೆ ಎನ್ನುವುದು ಸಮಂಜಸವಾಗಲಾರದು. ಹಿಂದೆ ದಿನಕರನ್ ಅಧಿಕಾರಾವಧಿಯಲ್ಲಿ ಇವುಗಳಿಗೆ ಕಡಿವಾಣ ಹಾಕಿದ್ದರು. ನಗರದಲ್ಲಿರುವ ಪೊಲೀಸ್ ಸಿಬ್ಬಂದಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.